ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ…
ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ ಯಾರಗಟ್ಟಿ ಅವರು ಕರ್ನಾಟಕ ಸರ್ಕಾರದ ಸಚಿವ ಸಂತೋಷ್ ಲಾಡ್ ಅವರಿಗೆ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಿದರು…

ಈ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಪರಸ್ಪರ ಆತ್ಮೀಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ ಮುಖಂಡರು, ಸಾರ್ವಜನಿಕ ಬದುಕಿನಲ್ಲಿ ಸಚಿವರು ಸಲ್ಲಿಸುತ್ತಿರುವ ಸೇವೆ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು…
ಕಾರ್ಯಕ್ರಮವು ಅತ್ಯಂತ ಆತ್ಮೀಯ ವಾತಾವರಣದಲ್ಲಿ ನಡೆದಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಸಚಿವರಿಗೆ ಶುಭಾಶಯಗಳನ್ನು ಕೋರಿದರು. ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ ಯಾರಗಟ್ಟಿ ಅವರು ಸಚಿವ ಸಂತೋಷ್ ಲಾಡ್ ಅವರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಾ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news

