ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..?
ಹುಬ್ಬಳ್ಳಿ: ಮರಳು ದಂಧೆಯ ಮೇಲೆ ಲೋಕಾಯುಕ್ತರ ದಾಳಿ ಬೀಳುತ್ತಿದ್ದಂತೆ, ಹುಬ್ಬಳ್ಳಿಯಲ್ಲಿ ಮತ್ತೊಂದು ಕುತೂಹಲಕಾರಿ ಚರ್ಚೆ ಶುರುವಾಗಿದೆ…
ಲಂಚದ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದ ಬೆನ್ನಲ್ಲೇ, ಮರಳು ದಂಧೆಯ ಹಿಂದೆ ಓಡಾಡುತ್ತಿದ್ದ ಕೆಲವರು ಇದೀಗ ಏಕಾಏಕಿ ಕಾಣೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ….

ಲೋಕಾಯುಕ್ತರ ದಾಳಿ ಬೀಳುವವರೆಗೂ ಎಲ್ಲವೂ ಸರಾಗವಾಗಿತ್ತಂತೆ…
ಆದರೆ ದಾಳಿ ಬಿದ್ದ ಕೂಡಲೇ ಕೆಲವರ ಓಡಾಟವೇ ಬದಲಾಗಿದೆ ಎನ್ನಲಾಗುತ್ತಿದೆ..!
ಯಾರು ಈ ಹುಬ್ಬಳ್ಳಿಯಿಂದ ಆಣಿ ಒಂಟಿ’? ಮರಳು ಲಾರಿಗಳ ಓಡಾಟದ ಹಿಂದೆ ಇವರ ಪಾತ್ರವೇನು..?
ಪೊಲೀಸ್ ಠಾಣೆ–ಮರಳು ಲಾರಿ–ಹಣ ವಸೂಲಿ ಜಾಲದ ನಡುವೆ ಇವರ…? ಲೋಕಾಯುಕ್ತರ ಬಲೆಗೆ ಸಿಕ್ಕಿದ್ದು ಕೆಳಹಂತದ ಸಿಬ್ಬಂದಿ ಮಾತ್ರನಾ..? ಅಥವಾ ತನಿಖೆ ಮುಂದುವರಿದರೆ ಇನ್ನೂ ದೊಡ್ಡ ಹೆಸರುಗಳು ಹೊರಬರಲಿವೆಯಾ..?
ದಾಳಿ ಬಳಿಕ ಏಕಾಏಕಿ ‘ಅಂಡರ್‌ಗ್ರೌಂಡ್’ ಆಗಿರುವವರ ಬಗ್ಗೆ ಈಗ ಹುಬ್ಬಳ್ಳಿಯಲ್ಲಿ ಚರ್ಚೆ ಜೋರಾಗಿದೆ…
ಲೋಕಾಯುಕ್ತರ ದಾಳಿ ಬಿದ್ದ ಮೇಲೆ ಕಾಲು ಕೆತ್ತಿ ಓಡಿದ್ದು ಯಾರು..? ಹುಬ್ಬಳ್ಳಿಯಿಂದ ‘ಆಣಿ ಒಂಟಿ’ಯ ಅಸಲಿ ಕಹಾನಿ ಏನು…?ತನಿಖೆ ಮುಂದುವರಿದಂತೆ ಒಂದೊಂದೇ ಗುಟ್ಟು ಬಯಲಾಗಬೇಕಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

