ಹಿರಿಯ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲಾ, ಇವರಾಡಿದ್ದೇ ಆಟ. ಸಮವಸ್ತ್ರ ಇಲ್ಲ, ಸಮಯ ಪ್ರಜ್ಞೆ ಇಲ್ಲ…ಹುಬ್ಬಳ್ಳಿ – ಧಾರವಾಡ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ಇದ್ದು, ಹು-ಧಾ ಪೋಲಿಸರು ಈ ಸೂಚನೆಯನ್ನು ಸರಿಯಾಗಿ ಪಾಲಿಸದೇ ಇರುವುದು ವಿಪರ್ಯಾಸವೇ ಸರಿ..ಹೌದು ಶಿಸ್ತಿಗೆ

ಇನ್ನೋಂದು ಹೆಸರೆ ಪೋಲಿಸ್ .ಇಂತಹ ಹುದ್ದೆಯ ಸಮವಸ್ತ್ರವನ್ನು ಮೈಮೇಲೆ ತೊಡಬೇಕು ಎಂಬುವುದು ಎಷ್ಟೋ ಜನರ ಕನಸು. ಆದರೆ ಹು-ಧಾ ಪೋಲಿಸರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಸಮವಸ್ತ್ರ ಧರಿಸಬೇಕು ಎಂದು ಕಡ್ಡಾಯವಾಗಿ ಸೂಚನೆ ನೀಡಿದ್ದರು, ಸರಿಯಾಗಿ ನಿಯಮ ಪಾಲನೆಯಾಗುತ್ತಿಲ್ಲ.ಈ ಹಿಂದೆ ಮಾನ್ಯ ಹು-ಧಾ ಪೋಲಿಸ್ ಆಯುಕ್ತರು ಠಾಣೆಗೆ ಭೇಟಿ ನೀಡಿದ್ದರು, ಆ ವೇಳೆ ಉಪವಿಭಾಗದ ಪೋಲಿಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಲ್ಲಿ ಎಸ್.ಬಿ. ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಪೋಲಿಸ್ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದರು. ಮತ್ತು ರೋಲ್ ಕಾಲ್ ವೇಳೆ ಪೋಲಿಸ್ ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಮಾನ್ಯ ಆಯುಕ್ತರಾಗಲಿ, ಮೇಲಿನ ಅಧಿಕಾರಿಗಳಾಗಲಿ ಅನಿರಿಕ್ಷೀತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಗಳು ಮಪ್ತಿಯಲ್ಲಿರುವುದು ಕಂಡು ಬಂದರೆ ಅಂತವರ ಮೇಲೆ ಸೂಕ್ತ ಶಿಸ್ತಿನ ಕ್ರಮ

ಕೈಗೊಳ್ಳಲಾಗುವುದು ಮತ್ತು ಸಂಬಂದಪಟ್ಟ ಠಾಣಾಧಿಕರಿಗಳನ್ನು ಕೂಡ ಅದಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.ಹಾಗಿದ್ದರೂ ಕೂಡ ಸಿಬ್ಬಂದಿಗಳು ನಿಯಮಗಳನ್ನು ಪಾಲಿಸದೇ ಆಯುಕ್ತರ ಮಾತನ್ನು ಗಾಳಿತೆ ತೂರಿ ಮತ್ತೇ ಸಮವಸ್ತ್ರ ಇಲ್ಲದೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.ಆಯುಕ್ತರ ಸೂಚನೆಗೆ ಬೆಲೆ ಕೊಡದೆ ಮನಸಿಗೆ ಬಂದಂತೆ ನೆಡೆದುಕೊಳ್ಳುತ್ತಿದ್ದಾರೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

