ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕಾರಿಪುರದ ನೂತನ ಶಾಸಕ ಬಿ.ವೈ.ವಿಜಯೇಂದ್ರ ಅವರ ಬೆನ್ನುತಟ್ಟಿ ಕುಶಲೋಪರಿ ವಿಚಾರಿಸಿದರು. ಪ್ರಮಾಣ ಸ್ವೀಕರಿಸಲು ಬಂದ ಅವರು ತಮಗೆ ಎದುರಾದ ಸಿದ್ದರಾಮಯ್ಯ ಅವರ ಬಳಿ ಹೋಗಿ ಕೈ ಮುಗಿದರು. ಸಿದ್ದರಾಮಯ್ಯ ಪ್ರೀತಿಯಿಂದಲೇ ಬೆನ್ನು ತಟ್ಟಿದ್ದರು.

ವಿಧಾನಸಭೆಯೊಳಗೂ ಅವರು ಆಡಳಿತ ಮತ್ತು ವಿರೋಧ ಪಕ್ಷದ ಸಾಲಿನದ್ದ ಎಲ್ಲ ಹಿರಿಯರು ಮತ್ತು ಕಿರಿಯ ಶಾಸಕರ ಬಳಿಗೆ ಹೋಗಿ ಮಾತನಾಡಿಸಿ, ಅಭಿನಂದಿಸಿದರು.
ಪ್ರಮಾಣ ಸ್ವೀಕರಿಸಿದ ಹರೀಶ್ ಪೂಂಜಾ ಶ್ರೀರಾಮಚಂದ್ರನ ಹೆಸರಿನಲ್ಲಿ, ಲಕ್ಷ್ಮಿಹೆಬ್ಬಾಳ್ಕರ್ ಅವರು ಬಸವಣ್ಣ, ಮಹೇಶ್ ಟೆಂಗಿನಕಾಯಿ- ಮಹಾಕೂಟೇಶ್ವರ, ಮಾನಪ್ಪ ಡಿ ವಜ್ಜಲ್- ವೀರನಾಗಮ್ಮ, ರಿಜ್ವನ್ ಅರ್ಷದ್- ಸಂವಿಧಾನ, ಶರಣು ಸಲಗರ ಅವರು ಬಸವಣ್ಣ ಮತ್ತು ಛತ್ರಪತಿ ಶಿವಾಜಿ, ಎನ್.ಎಚ್. ಕೋನರಡ್ಡಿ- ರೈತರು, ಬಿ.ವೈ.ವಿಜಯೇಂದ್ರ- ಹುಚ್ಚೂರಾಯಸ್ವಾಮಿ, ಯಶವಂತ ಸುವರ್ಣ ಅವರು ಉಡುಪಿ ಶ್ರೀಕೃಷ್ಣ, ಗೋಮಾತೆ ಮತ್ತು ವಿಭುದೇಶ ಸ್ವಾಮೀಜಿಯವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

