Breaking News

ಲಾರಿ ಪತ್ತೆ , ಅಕ್ಕಿ ಕಳ್ಳತನ ಮಾಡಿದ ಚಲಾಕಿ ಕಳ್ಳರು

ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಎಪಿಎಂಸಿ ಬಳಿ ಅನ್ನಭಾಗ್ಯ ಅಕ್ಕಿ ಲೋಡ್ ಆಗಿದ್ದ ಲಾರಿಯನ್ನು ಮೇ 29ರಂದು ರಾತ್ರಿ ಕಳ್ಳರು ಕದ್ದು ಪರಾರಿಯಾಗಿದ್ದರು. ಇದೀಗ ತಾಲೂಕಿನ ಹೊರ್ತಿ ಗ್ರಾಮದ ಹೊರವಲಯದಲ್ಲಿ ಖಾಲಿ ಲಾರಿ ಪತ್ತೆಯಾಗಿದೆ.

ಲಾರಿಯಲ್ಲಿ ಲೋಡ್ ಆಗಿದ್ದ 7.50 ಲಕ್ಷ ರೂಪಾಯಿ ಮೌಲ್ಯದ 20 ಟನ್ ಸರ್ಕಾರದ ಪಡಿತರ ಅಕ್ಕಿಯನ್ನು ಮಾತ್ರ ಎಗರಿಸಿರುವ ಕಳ್ಳರು ಖಾಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಶಹಾಪುರ ಪೊಲೀಸರು ಇದೀಗ ವಿಶೇಷ ತಂಡ ರಚಿಸಿ ಚಾಲಾಕಿ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಕಳ್ಳತನವಾಗಿದ್ದ ಲಾರಿ ಬಿಟ್ಟು ಹೋದದ್ದನ್ನು ನೋಡಿದರೆ ಇದು ಕಳ್ಳರು ಮಾಡಿದ ಕೆಲಸವಲ್ಲ ಪಡಿತರ ಅಕ್ಕಿಯ ದಂಧೆಕೋರರ ಕೈವಾಡ ಈ ಕೃತ್ಯದ ಹಿಂದಿದೆ ಇದೆ ಎನ್ನುವ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ.

ಅಕ್ಕಿ ಲಾರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಶಾಸಕ ಹಾಗೂ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ, ಈಗಾಗಲೇ ಖಾಲಿ ಲಾರಿ ಸಿಕ್ಕಿದೆ. ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗೆ ಜಿಪಿಎಸ್ ಅಳವಡಿಸಿರಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದೆಯೋ, ಗುತ್ತಿಗೆದಾರರು ನಿಯಮ ಉಲ್ಲಂಘನೆ ಮಾಡಿದ್ದಾರೋ ಎಲ್ಲವನ್ನು ಕೂಡ ಕೂಲಕುಂಷವಾಗಿ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *