Breaking News

ಹುಬ್ಬಳ್ಳಿ ಪೋಲಿಸರ ಕಾರ್ಯಾಚರಣೆ,ನಾಲ್ಕು ಜನ ಮನೆಗಳ್ಳರ ಬಂಧನ

ಹುಬ್ಬಳ್ಳಿ ಇತ್ತೀಚಿಗೆ ಎಸ್.ಎಮ್. ಕೃಷ್ಣಾ ನಗರದಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ರವರ ಮಾರ್ಗದರ್ಶನದಲ್ಲಿ ಕಸಬಾ ಪೇಟೆ ಪೋಲಿಸ ಠಾಣೆಯ ಇನ್ಸಪೆಕ್ಟರ್ ಶ್ರೀ ರಾಘವೇಂದ್ರ ಹೆಚ್ , ಹಳ್ಳೂರ ರವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ತಂಡವು ನಾಲ್ಕು ಜನ ಮನೆಗಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ, ಹುಬ್ಬಳ್ಳಿ ಹಾಗೂ ಕೊಪ್ಪಳ ಪೋಲಿಸ ಠಾಣೆಯಲ್ಲಿ ಕಳ್ಳತನವಾಗಿದ್ದ ಪ್ರಕರಣ ಬೇದಿಸಿ ಮನೆ ಕಳ್ಳತನದಲ್ಲಿ ತೊಡಗಿಕೊಂಡ ಆರೋಪಿಗಳಿಂದ ಅಂದಾಜು 4,95,380 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಮನೆಗಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಆರೋಪಿಗಳಿಂದ


1) 50.3.ಗ್ರಾಂ ಬಂಗಾರದ ಆಭರಣಗಳು
2) 200 ಗ್ರಾ ಬೆಳ್ಳಿ ಆಭರಣಗಳು
3) ಕೃತ್ಯಕ್ಕೆ ಬಳಿಸಿದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೋಲಿಸ ಪ್ರಕಟನೆಯಲ್ಲಿ ತಿಳಿಸಿದ್ದಾರೆ ಮನೆಗಳ್ಳರನ್ನು ಬಂಧನ ಮಾಡುವಲ್ಲಿ ಯಶಸ್ವಿಯಾದ ಕಸಬಾಪೇಟೆ ಠಾಣೆ ಪೋಲಿಸ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಪೋಲಿಸ ಆಯುಕ್ತರು ಅಭಿನಂದಿಸಿದ್ದಾರೆ

Share News

About Shaikh BigTv

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *