Breaking News

ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಸೇರಿಸುವಂತೆ ಒತ್ತಾಯ.

ಲಕ್ಷ್ಮೇಶ್ವರ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎಂದು ಕಾಣುತ್ತಿದೆ ಹಾಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಸೇರಿಸುವಂತೆ ಒತ್ತಾಯಿಸಿ ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಸೇರಿದಂತೆ ಸ್ವಚ್ಚತೆಯ ಕೊರತೆ ಎಂದು ಕಾಣುತ್ತಿದೆ. ಇನ್ನೂ ಚಿಕ್ಕಮಕ್ಕಳ ವೈದ್ಯರು ಸ್ತ್ರೀ ರೋಗ ತಜ್ಞರು ಸೇರಿದಂತೆ ಅನೇಕ ವೈದ್ಯರು ಈ ಆಸ್ಪತ್ರೆಯಲ್ಲಿ ಇಲ್ಲ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸ್ವಚ್ಚತೆಯ ವ್ಯವಸ್ಥೆ ಎಲ್ಲವೂ ಸರಿಯಾಗಿ ಇಲ್ಲ ಎಂದು ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಸುಮಾರು 50 ಸಾವಿರ ಜನರನ್ನು ಹೊಂದಿರುವ ಪಟ್ಟಣವಾಗಿದೆ ಇನ್ನೂ ಲಕ್ಷ್ಮೇಶ್ವರ ಪಟ್ಟಣ ಸುತ್ತಮುತ್ತಲಿನಲ್ಲಿ 47 ಹಳ್ಳಿಗಳು ಇವೆ ಈ ಎಲ್ಲ ಜನರು ಈ ಸಮುದಾಯ ಆರೋಗ್ಯ ಕೇಂದ್ರವನ್ನೆ ನಂಬಿಕೊಂಡಿದ್ದಾರೆ ಆದರೆ ಇಲ್ಲಿ ಆಡಳಿತ ಸರಿಯಾಗಿ ಇಲ್ಲದ ಕಾರಣ ಜನರು ಖಾಸಗಿ ಆಸ್ಪತೆಯತ್ತ ಮುಖ ಮಾಡಿಕೊಂಡಿದ್ದಾರೆ ಆದರಿಂದ ಆದಷ್ಟೂ ಬೇಗ ಈ ಸಮುದಾಯ ಆರೋಗ್ಯ ಕೇಂದ್ರವನ್ನು ನೂರು ಹಾಸಿಗೆಯುಳ್ಳ ಆಸ್ಪತ್ರೆ ಮಾಡಬೇಕಿದೆ ಇನ್ನೂ ಈ ಆಸ್ಪತೆಯನ್ನು ಸರಕಾರ ಮೇಲ್ದರ್ಜೆಗೆ ಸೇರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Share News

About BigTv News

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *