Breaking News

ನೂತನ ಗೃಹ ಸಚಿವರ ಕಡಕ್ ವಾರ್ನಿಂಗ್ : ಜಿ ಪರಮೇಶ್ವರ

ಗೃಹ ಸಚಿವ ಜಿ ಪರಮೇಶ್ವರ್‌ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡುವವರಿಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ. ಲಾಟಿ ಏಟು ಬೇಕೋ, ಗುಂಡು ಬೇಕೋ, ಶಾಂತಿ ಬೇಕೋ ನೀವೇ ಆಯ್ಕೆ ಮಾಡಿ ಎಂದು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.


ಲಾಟಿ ಏಟು ಬೇಕೋ, ಪಿಸ್ತೂಲ್‌ ಗುಂಡು ಬೇಕೋ, ಶಾಂತಿ ಬೇಕೋ?
ಯಾವುದು ಬೇಕೋ ನೀವೇ ತೀರ್ಮಾನ ಮಾಡಿ ಎಂದ ಜಿ ಪರಮೇಶ್ವರ್
ಶಾಂತಿ ಸುವ್ಯವಸ್ಥೆ ಕದಡುವವರಿಗೆ ನೂತನ ಗೃಹ ಸಚಿವರ ನೇರ ಎಚ್ಚರಿಕೆ
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ,‌ ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್ ಸಿಗುತ್ತದೆ, ಒದೆನೂ ಸಿಗುತ್ತದೆ, ಮುಂದುವರಿದು ಗುಂಡು ಹಾರಿಸೋದು ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಮೂಲಕ ಶಾಂತಿ ಸುವ್ಯವಸ್ಥೆ ಕದಡುವವರಿಗೆ ಪರೋಕ್ಷವಾಗಿ ನೂತನ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಲಾಟಿ ಏಟು ತಿನ್ನಬೇಕೋ? ಗುಂಡು ಹಾರಿಸಿಕೊಳ್ಳಬೇಕೋ ಅಥವಾ ಶಾಂತಿಯಿಂದ ರಾಜ್ಯ ನಡೆಸಬೇಕೋ ಎಂದು ಜನರೇ ತೀರ್ಮಾನ ಮಾಡಲಿ. ನಮ್ಮ ಪ್ರಣಾಳಿಕೆಯಲ್ಲಿ ಯಾರು ಶಾಂತಿ ಕದಡುತ್ತಾರೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ. ಅವರು ಯಾರು ಅದನ್ನು ಮಾಡಲ್ಲ ಎಂದರೆ ಭಯ ಪಡುವ ಅಗತ್ಯ ಇಲ್ಲ, ಮಾಡುತ್ತೇವೆ ಅಂದರೆ ಅವರಿಗೆ ಭಯ ಆಗುತ್ತದೆ ಎಂದರು.


G. Parameshwara: ಕಾಲ ಹಿಂಗೇ ಇರೋಲ್ಲ, ಕಾಲ ಬದಲಾವಣೆಯಾಗುತ್ತೇ! ತುಮಕೂರು ಡಿಸಿ, ಜಿಪಂ ಸಿಇಒಗೆ ಮಾಜಿ ಡಿಸಿಎಂ ಪರಮೇಶ್ವರ್ ವಾರ್ನಿಂಗ್‌
ನಾಗರೀಕ ಸಮುದಾಯ ಹಾಗೂ ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ. ನಮ್ಮದು ಕುವೆಂಪು ನಾಡು,‌ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ. ಜನರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು. ಇನ್ನು ನೈತಿಕ ಪೊಲೀಸ್ ಗಿರಿ ಹಾಗೂ ‌ಮತೀಯ ಘಟನೆಗಳನ್ನು ಸಹಿಸುವುದಿಲ್ಲ. ಅದಕ್ಕೆ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದರು.


ರಾಜ್ಯದ ಸರ್ಕಾರಿ, ಅನುದಾನಿತ ಶಾಲೆಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಬ್ಯಾನ್‌ಗೆ ಚಿಂತನೆ! ಕುತೂಹಲ ಕೆರಳಿಸಿದ ಸರ್ಕಾರದ ನಡೆ
ಬಜರಂಗದಳ ನಿಷೇಧ ಮಾಡುವ ಸಂದರ್ಭ ಬರಲಾರದು!
ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಚರ್ಚೆ ಮಾಡಿದ್ದೇನೆ. ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾರು ನೇರ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲ್ಲ ಎಂದರು. ಬಜರಂಗದಳ ಬ್ಯಾನ್ ವಿಚಾರವಾಗಿ ಮಾತನಾಡಿ ಬಜರಂಗದಳ ಬ್ಯಾನ್ ಮಾಡುವ ಸಂದರ್ಭ ಬರಲಾರದು, ಬಂದರೆ ನಿಷೇಧ ಮಾಡ್ತೀವಿ ಎಂದು ಹೇಳಿದರು.

Share News

About BigTv News

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *