Breaking News
????????????????????????????????????

ಹುಬ್ಬಳ್ಳಿ – ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ. ರಾಜಕೀಯ ಕುಮ್ಮಕ್ಕಿಗೆ ಅಧಿಕಾರಿಗಳು ಮಣಿದಾರ ….?

ಹುಬ್ಬಳ್ಳಿ ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ ಜೋರಾಗಿ ನಡೆದಿದೆ.ಒಂದೇ ಪೋಲೀಸ್ ಸಿಬ್ಬಂದಿಯನ್ನು ಎರಡು ಸಲ ವರ್ಗಾವಣೆ ಮಾಡಿ ಪೋಲಿಸ್ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜಕೀಯ ನಾಯಕರ ಒತ್ತಡಕ್ಕೆ ಅಧಿಕಾರಿಗಳ ಮಣಿದರಾ..? ಗೊತ್ತಿಲ್ಲ. ಕಲವು ಪೋಲಿಸ್ ಸಿಬ್ಬಂದಿಗಳು ರಾತ್ರೋ ರಾತ್ರಿ ವರ್ಗಾವಣೆಗೊಂಡಿದ್ದಾರೆ. ಗುಳೇದ ಗುಡ್ಡದ ಎಂಬ ಪೋಲಿಸ್ ಸಿಬ್ಬಂದಿಯ ಪವರ್ ಎಲ್ಲಾ ಠಾಣೆಯಲ್ಲಿ ಕೇಳಿ ಬರುತ್ತಿದೆ,ಹುಬ್ಬಳ್ಳಿ ಧಾರವಾಡ ಪೋಲಿಸ್ ಸಿಬ್ಬಂದಿಗಳ ವರ್ಗಾವಣೆ ವಿಚಾರದಲ್ಲಿ ಕಾಣದ ಕೈಗಳ ಕೈವಾಡ ನಡೆಯುತ್ತಿರುವದು ಮೇಲ್ನೋಟಕ್ಕೆ ಸಾಬೀತಹಾಗಿದೆ. ಹಲವು ಸಮಸ್ಯೆಗಳು ಇದ್ದರು

ಸಹ ಕಾರ್ಯನಿರ್ವಹಣೆ ಮಾಡುತ್ತೀರುವ ಸಿಬ್ಬಂದಿಗಳಿಗೆ ವರ್ಗಾವಣೆ ಭಾಗ್ಯ ಇಲ್ಲವಾಗಿದೆ. ಹುಬ್ಬಳ್ಳಿ ಯಿಂದ ಧಾರವಾಡಕ್ಕೆ ಹಾಗೂ ಧಾರವಾಡದಿಂದ ಹುಬ್ಬಳ್ಳಿಗೆ ಬಂದು ಕರ್ತವ್ಯ ನಿರ್ವಹಣೆ ಮಾಡುತ್ತೀರುವ ಸಿಬ್ಬಂದಿಗಳಿಗೆ ವರ್ಗಾವಣೆ ಇಲ್ಲದೆ ದಿನನಿತ್ಯ ಸಮಸ್ಯೆ ಯಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕಾದ ಅನಿರ್ವಾಯತೆ ನಿರ್ಮಾಣವಾಗಿದೆ.ಅಷ್ಟೇ ಅಲ್ಲದೆ ಕೌಟುಂಬಿಕ ಸಮಸ್ಯೆಗಳು, ಅನಾರೋಗ್ಯದಿಂದ ಇರುವ ಪೋಲಿಸ್ ಸಿಬ್ಬಂದಿಗಳಿಗೆ ವರ್ಗಾವಣೆ ಇಲ್ಲದೆ ಸಂಕಷ್ಟದಿಂದಲೇ ಕರ್ತವ್ಯಕ್ಕೆ ದೂರದಲ್ಲಿನ ಠಾಣೆಗಳಿಗೆ ಹಾಜರಾಗ ಬೇಕಾದ ಪರಿಸ್ಥಿತಿ ಹುಬ್ಬಳ್ಳಿ ಧಾರವಾಡದಲ್ಲಿ ಇದೆ ಎಂದು ಕೆಲವು ಪೋಲಿಸ್ ಸಿಬ್ಬಂದಿಗಳು ತಮ್ಮ ಅಳಲನ್ನು ಬಿಗ್ ಟಿವಿ ಜೊತೆಗೆ ತೋಡಿಕೊಂಡಿದ್ದಾರೆ…

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *