Breaking News

ಮರಳು ಅಡ್ಡೆ ಮೇಲೆ ಶಾಸಕಿ ಹಾಗೂ ಅಧಿಕಾರಿಗಳ ದಾಳಿ

ನಿನ್ನೆ ತಡ ರಾತ್ರಿ ಮರಳು ಅಡ್ಡೆ ಮೇಲೆ ಶಾಸಕಿ ಕರೆಮ್ಮ ಜಿ ನಾಯಕ್ ದಾಳಿ ಮಾಡಿದ್ದಾರೆ.ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೇರುಂಡಿ ಗ್ರಾಮದ ಬಳಿ ಕರೆಮ್ಮ ನಾಯಕ್ ಮಾಹಿತಿ ಪಡೆದು ಬೆಂಬಲಿಗರೊಂದಿಗೆ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಮೂರು ಜೆಸಿಬಿ, ಮೂರು ಟಿಪ್ಪರ್ ಗಳನ್ನು ಶಾಸಕಿ ಕರೆಮ್ಮ ನಾಯಕ್ ಪತ್ತೆ ಹೆಚ್ಚಿದ್ದಾರೆ. ಬಳಿಕ ದೇವದುರ್ಗ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದ್ರು.


ಅಧಿಕಾರಿಗಳು ಮರಳು ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಎಂದು ಕರೆಮ್ಮ ನಾಯಕ್ ಈ ಬಗ್ಗೆ ಆರೋಪಿಸಿದರು. ಸದ್ಯ ಶಾಸಕಿಯ ದಾಳಿಯಿಂದ ಅಧಿಕಾರಿಗಳು 35 ಲಕ್ಷ ಮೌಲ್ಯದ ಮೂರು ಜೆಸಿಬಿ ಹಾಗೂ ಮೂರು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಹಾಗೂ ಆರು ವಾಹನಗಳ ಚಾಲಕರು ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ‌ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ತುಂಬು ಗರ್ಭಿಣಿ ಅನುಮಾನಾಸ್ಪದ ಸಾವು, ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ!!

ತುಂಬು ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೂದಿವಾಳ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದ್ದು, ತಡವಾಗಿ …

Leave a Reply

Your email address will not be published. Required fields are marked *