KPSC ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಹುದ್ದೆ ಕೊಡಿಸುವುದಾಗಿ ಹಣದ ವ್ಯವಹಾರ ನಡೆದಿರುವ ಆರೋಪ ಸಿಐಡಿ ತನಿಖೆಯಲ್ಲಿ ಬಹಿರಂಗವಾಗಿದೆ. ಆರಂಭದಲ್ಲಿ ₹1.10 ಕೋಟಿ ಕೇಳಲಾಗಿದ್ದು, ಬಳಿಕ ₹90 ಲಕ್ಷ, ₹80 ಲಕ್ಷಕ್ಕೆ ಇಳಿಸಿ ಕೊನೆಗೆ ₹40 ಲಕ್ಷಕ್ಕೆ ಡೀಲ್ ಮಾಡಲಾಗಿತ್ತು ಎನ್ನಲಾಗಿದೆ. 2025ರ ಡಿಸೆಂಬರ್ 20ರಂದು ಅಭ್ಯರ್ಥಿ ಮೊಹಮ್ಮದ್ ಸುಹೇಲ್ ಬಂಡೇಕೋಳ್ ಜೊತೆ ₹40 ಲಕ್ಷಕ್ಕೆ ವ್ಯವಹಾರ ಕುದುರಿಸಿ, ₹20 ಲಕ್ಷ ಮುಂಗಡ ಪಡೆದ ಆರೋಪವಿದೆ. ಒಟ್ಟು 21 ಅಭ್ಯರ್ಥಿಗಳೊಂದಿಗೆ ಹುದ್ದೆಗಾಗಿ ವ್ಯವಹಾರ ನಡೆಸಲು ಪ್ರಯತ್ನಿಸಲಾಗಿತ್ತು ಎನ್ನಲಾಗಿದೆ. ಇದರ ನಡುವೆ ಪ್ರಶ್ನೆಪತ್ರಿಕೆ ಮಾರಾಟದ ಆರೋಪವೂ ತನಿಖೆಯಲ್ಲಿ ಕೇಳಿಬಂದಿದ್ದು, ಮಧ್ಯವರ್ತಿ ಬಸವರಾಜ್ ಕನ್ನಾಳಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ. ಸುಮಾರು 29 ಅಭ್ಯರ್ಥಿಗಳಿಂದ ₹40 ಲಕ್ಷದಿಂದ ₹80 ಲಕ್ಷದವರೆಗೆ ಮುಂಗಡ ಸಂಗ್ರಹಿಸಿರುವ ಶಂಕೆ ಇದ್ದು, ಹಣ ಯಾರಿಗೆ ಸೇರಿತು ಎಂಬುದನ್ನು ಸಿಐಡಿ ತನಿಖೆ ನಡೆಸುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

