ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ದಲಿತ ಸಿಎಂ ಚರ್ಚೆ ವಿಚಾರಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಚರ್ಚೆ ಇಲ್ಲ.ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ. ಎಐಸಿಸಿ, ಮಂತ್ರಿಮಂಡಲ ಈ ಬಗ್ಗೆ ಸ್ಪಷ್ಟತೆ ನೀಡಿದೆಸಿಎಂ ರಾಜೀನಾಮೆ ನೀಡುವಂತೆ ಎಐಸಿಸಿ ಕೇಳಿಯೂ ಇಲ್ಲ ಎಂದರು.
ಹುಬ್ಬಳ್ಖಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಸಧ್ಯಕ್ಕೆ ಮುಖ್ಯಮಂತ್ರಿ ಸ್ಥಾನಖಾಲಿ ಇಲ್ಲ.ಇದೆಲ್ಲ ಕೇವಲ ಊಹಾಪೋಹವಷ್ಟೇ.
ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ದಾಟಿಲ್ಲ.ಬಿಜೆಪಿಯವರು ಯಾವಾಗಾದ್ರೂ ಐದು ವರ್ಷ ಅಧಿಕಾರ ನಡೆಸಿರುವ ಉದಾಹರಣೆ ಇದೆಯಾ..?ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರೋ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ.ಅಧಿಕಾರ ಸಿಕ್ಕಾಗ ಬಿಜೆಪಿಯವರು ಸರಿಯಾಗಿ ಅಧಿಕಾರ ಮಾಡಲ್ಲ.ಅಧಿಕಾರ ಕಳೆದುಕೊಂಡಾಗ ಅಧಿಕಾರ ಬೇಕು ಅಂತಾರೆ.ನಮ್ಮಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಜಾತಿ ಜನಗಣತಿ ವಿಚಾರವಾಗಿ ಸ್ವಪಕ್ಷದಲ್ಲೇ ಅಪಸ್ವರ ವಿಚಾರ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ.ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಮುಕ್ತವಾಗಿ ಚರ್ಚೆ ನಡೆಯಲಿದೆ.ಜಾತುಜನಗಣತಿ ಹಳೆಯದಾಗಿದ್ದರಿಂದ ಕೆಲವೊಬ್ಬರು ಹೇಳಿಕೆ ನೀಡಿದ್ದಾರೆ.ಈ ಬಗ್ಗೆ ಕೆಲವೊಬ್ಬರು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದಾರೆ.ಹೀಗಾಗಿ ಈ ಸಮೀತಿಯಲ್ಲಿ ಚರ್ಚೆಯಾದ ನಂತರ ನಿರ್ಧಾರ ಮಾಡುತ್ತಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

