ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಅನುಮಾನಾಸ್ಪದ ಓಡಾಟ ಕುರಿತು ಕರೆ ಬಂದಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್ ಅಧಿಕಾರಿಗಳು ವ್ಯಕ್ತಿ ಒಬ್ಬ ನನ್ನು ಬಂಧನ ಮಾಡಿದ್ದಾರೆ , 112 ತುರ್ತು ಸಹಾಯವಾಣಿಗೆ ಕರೆ ಬಂದ ಹಿನ್ನಲೆ ಇ.ಆರ.ವಿ. ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಒಬ್ಬ ವ್ಯಕ್ತಿಯನ್ನು ಸ್ಥಳೀಯರು ಹಿಡದಿದ್ದು ಆತನನ್ನು ಸ್ಥಳೀಯ ಪೊಲೀಸ ಠಾಣೆಗೆ ಒಪ್ಪಿಸಿರುತ್ತಾರೆ. ವ್ಯಕ್ತಿ ಅರೆ ಪ್ರಜ್ಞೆ ವ್ಯವಸ್ಥೆಯಲ್ಲಿ ಇದ್ದ ಕಾರಣ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ . ಇದುವರೆಗೂ ವ್ಯಕ್ತಿಯ ಬಗ್ಗೆ ಯಾವುದೇ ರೀತಿಯ ನಿಖರವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸದ್ಯ ಆ ವ್ಯಕ್ತಿ ನರಗುಂದ ಪೋಲಿಸ್ ಠಾಣೆಯಲ್ಲಿ ಇದ್ದಾನೆ
bigtvnews | Hubli Dharwad News | Kannada News | Karnataka News Hubli News | News In Hubli | Local news





