ಧಾರವಾಡ :ಧಾರವಾಡದ ಕೆಲಗೇರಿ ಗ್ರಾಮದಲ್ಲಿ ಧಾರವಾಡ ವಿಭಾಗ “ಶೌರ್ಯ ಜಾಗರಣ ರಥ ಯಾತ್ರೆ” ಆಗಮಿಸಿದ್ದು. ಕೆಲಗೇರಿ ಗ್ರಾಮದ ಮಹಿಳೆಯರು ಪೂರ್ಣ ಕುಂಭದೊಂದಿಗೆ ಮತ್ತು ಗ್ರಾಮದ ರೈತರು ರಥವನ್ನು ಭವ್ಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿದ ಆರ್.ಎಸ.ಎಸ ನ ಹಿರಿಯರಾದ ಶ್ರೀಧರ ನಾಡಿಗೇರ ಅವರು ಮಾತನಾಡಿ ಸನಾತನ ಧರ್ಮ ಅಮರ, ಭಾರತ ಜಗತ್ತಗುರು ಆಗಬೇಕೆಂದ್ರೆ ಹಿಂದೂಗಳು ಜಾಗೃತವಾಗಬೇಕ, ಒಂದಾಗಬೇಕು ಎಂದು ಕರೆಕೊಟ್ಟರು.
ರಥದಲ್ಲಿ ಹನುಮನ ಮೂರ್ತಿ ಸ್ಥಾಪಿಸಲ್ಪಟ್ಟಿತು ರಥ ಯಾತ್ರೆಯು ದ್ವಿಚಕ್ರ ವಾಹನದ ಜಾಥಾದೂಂದಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ಸಂಚರಿತು.ಈ ಸಂದರ್ಭದಲ್ಲಿ ಡಾ. ರಾಮನಗೌಡರ, ಶಿವಾನಂದ ಸತ್ತಿಗೇರಿ, ಶಶಿ ಹಿರೇಮಠ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಪ್ರಮೋದ ಕಾರಕೂನ, ರುದ್ರಗೌಡರ್, ಶ್ರೀಮತಿ ಚಂದ್ರಕಲಾ ಕೊಟಬಾಗಿ, ರೇಣುಕಾ ಇರಕಲ್, ಅಮಿತ್ ಪಾಟೀಲ ,ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





