Breaking News

ಜಿಟಿ ಜಿಟಿ ಮಳೆಗೆ ತತ್ತರಿಸಿ ಶಾಲಾ ವಿದ್ಯಾರ್ಥಿಗಳು ಗದಗ ಲಕ್ಷ್ಮೇಶ್ವರದಲ್ಲಿ ಬಿಡದ ಮಳೆ

ಲಕ್ಷ್ಮೇಶ್ವರ; ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದ ರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮೋಡ ಕವಿದ ವಾತಾವರಣ ಜೊತೆಗೆ ಬೆಳಿಗ್ಗೆಯಿಂದ ಸಂಜೆವರೆಗೂ ಜಿಟಿ ಜಿಟಿ ಮಳೆಯಾಯಿತು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಡೀ ದಿನ ಮಲೆನಾಡು, ಕರಾವಳಿಯ ವಾತಾವರಣ ಕಂಡು ಬಂತು. ಇಡೀ ದಿನ ಶೀತ ಹವೆ ಜನರನ್ನು ಕಾಡಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೂರ್ಯನ ಬೆಳಕು ಸ್ವಲ್ಪ ಕಂಡಿದ್ದು ಬಿಟ್ಟರೆ ದಿನಪೂರ್ತಿ ಮೋಡಗಳು ನೇಸರನಿಗೆ ಅಡ್ಡವಾಗಿ ನಿಂತು ಮಂಜು ಬೆಳಕಿನ ವಾತವರಣ ಇತ್ತು.

ಮುಂಜಾನೆ 5.30ಗೆ ಆರಂಭವಾದ ಜಿಟಿ ಜಿಟಿ ಮಳೆ ರಾತ್ರಿವರೆಗೂ ಮುಂದುವರಿಯಿತು. ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸರ್ಕಾರಿ ನೌಕರರಿಗೆ ಸ್ವಲ್ಪ ತೊಂದರೆಯಾಯಿತು. ದ್ವಿಚಕ್ರವಾಹನಗಳಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೊಗಳನ್ನು ಅವಲಂಬಿಸಬೇಕಾಯಿತು.ನಿರಂತರ ಮಳೆಯಿಂದಾಗಿ ಲಕ್ಷ್ಮೇಶ್ವರದಲ್ಲಿ ಜನಸಾಮಾನ್ಯರ ಓಡಾಟಕ್ಕೂ ತೊಂದರೆಯಾಯಿತು. ಸಂಜೆ ಶಾಲೆ, ಕಚೇರಿಗಳು ಬಿಡುವ ಸಮಯಕ್ಕೆ ಮಳೆ ಸುರಿದಿದ್ದರಿಂದ, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಮನೆ ಸೇರಲು ಪರದಾಡಬೇಕಾಯಿತು.

Share News

About BigTv News

Check Also

ಗದಗ : ಲವ್ವರ್ ಬ್ಲ್ಯಾಕ್ಮೇಲ್‌ಗೆ ಬೇಸತ್ತ ಶಿಕ್ಷಕಿ ನೇಣಿಗೆ ಶರಣು!!

ಕಳೆದ ಐದು ವರ್ಷಗಳಿಂದ ಸೈರಾಬಾನು, ಮೈಲೇರಿ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದರು. ಆದರೆ, ಕೆಲ ದಿನಗಳ ಹಿಂದೆ ಇವರ ಸಂಬಂಧ ಮುರಿದುಬಿತ್ತು. ಪೋಷಕರ …

Leave a Reply

Your email address will not be published. Required fields are marked *