Breaking News

ಕೃಷಿ ವಿಶ್ವ ವಿದ್ಯಾಲಯ ಮತ್ತು ಅಗಡಿ ಕಾಲೇಜು ಒಡಂಬಡಿಕೆ ಕಾರ್ಯಕ್ರಮ;

ಲಕ್ಷ್ಮೇಶ್ವರ : ಕೃಷಿಕ್ಷೇತ್ರದಲ್ಲಿ ತಾಂತ್ರಿಕ ಸಂಶೋಧನೆಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಹಾಗೂ ಲಕ್ಷೇಶ್ವರ ನಗರದ ಪ್ರತಿಷ್ಠಿತ ಶ್ರೀ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜು ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಈ ಒಡಂಬಡಿಕೆಯು ಪರಸ್ಪರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ವಿನಿಮಯ, ಜಂಟಿ ಯೋಜನೆಗಳ ಪ್ರಸ್ತಾವನೆ ಸಲ್ಲಿಕೆ ಹಾಗೂ ಪ್ರಯೋಗಾಲಯಗಳ ಉಪಯೋಗಗಳನ್ನು ಒಳಗೊಂಡಿರುತ್ತದೆ. ಕೃಷಿ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಗಳಾದ ಡಾ. ಪಿ.ಎಲ್ ಪಾಟೀಲ ಮತ್ತು ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಉದಯಕುಮಾರ .ಎಸ್.ಹಂಪಣ್ಣವರ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್. ಎಸ್. ಅಂಗಡಿ, ಸಂಶೋಧನಾ ನಿರ್ದೇಶಕರಾದ ಡಾ. ಬಿ. ಡಿ. ಬಿರಾದಾರ, ಮತ್ತು ಪ್ರಧಾನ ವಿಜ್ಞಾನಿಗಳಾದ ಡಾ. ಪಿ. ಸುರೇಂದ್ರ ಸಂಶೋಧನಾ ಸಹಾಯಕ ನಿರ್ದೇಶಕರಾದ ಡಾ.ಪಿ.ಯು ಕೃಷ್ಣರಾಜ್, ಅಗಡಿ ಇಂಜಿನಿಯರಿಂಗ್ .ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪರಶುರಾಮ ಬಾರ್ಕಿ, ಸಹ ಪ್ರಾಧ್ಯಾಪಕರಾದ ಡಾ. ನವೀನ ಎ ನ್. ಮಾಳದ ಮತ್ತು ಡಾ. ರಾಜಶೇಖರ ಕುನಬೇವ ಉಪಸ್ಥಿತರಿದ್ದರು.

Share News

About BigTv News

Check Also

ಕರ್ನಾಟಕ ಲೋಕಾಯುಕ್ತ ದಾಳಿ ಶಹರ ಠಾಣೆಯ ASI ಲಾಕ್..

ಪೊಲೀಸರ ಲಂಚ ಪಡೆಯುವುದೇ ಶಾಶ್ವತವಲ್ಲಭ್ರಷ್ಟಾಚಾರಕ್ಕೆ ಕಾನೂನು ಕಡಿವಾಣಸತ್ಯ ಮತ್ತು ನ್ಯಾಯವೇ ಶಾಶ್ವತ… ಪ್ರಕರಣವೊಂದರಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗದಗ ಶಹರ …

Leave a Reply

Your email address will not be published. Required fields are marked *