Breaking News

ವಿದ್ಯಾರ್ಥಿ ವೇತನ ವಿತರಣೆ — ಸನ್ಮಾನ ಕಾರ್ಯಕ್ರಮ

ಧಾರವಾಡ : ವಿದ್ಯಾಪ್ರೇಮಿಗಳ ಆರ್ಥಿಕ ನೆರವಿನಿಂದ ,ನಗರದ ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆ ( ಟ್ರಸ್ಟ್ ) ಪ್ರತಿ ವರ್ಷದಂತೆ ಈ ವರ್ಷವೂ ಧಾರವಾಡ ಜಿಲ್ಲಾ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ 2022-23ರಲ್ಲಿ ಪ್ರಥಮ ಬಾರಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ . ಮೌನೇಶ್ವರ ಧರ್ಮನಿಧಿ ಸಂಸ್ಥೆ ( ಟ್ರಸ್ಟ್ ) ಅಧ್ಯಕ್ಷರಾದ ಮಹಾರುದ್ರ ಬಡಿಗೇರ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,  ಎಸ್.ಎಸ್.ಎಲ್.ಸಿ. ಮತ್ತು ದ್ವೀತಿಯ ಪಿ.ಯು.ಸಿ. ಯಲ್ಲಿ ಶೇಕಡಾ 85 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಮತ್ತು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಶೇಕಡಾ 90  ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ  ಮೊಬೈಲ್ ಸಂಖ್ಯೆ : 9880001666.9449750118.9980746332.9480667225.9972207510 ದಲ್ಲಿ ಸಂಪರ್ಕಿಸಬಹುದಾಗಿದೆ. ಶಿಷ್ಯವೇತನ ಪಡೆಯ ಬಯಸುವ ಅರ್ಹ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಿಳಿಯ ಹಾಳೆಯಲ್ಲಿ ಅರ್ಜಿ ಬರೆದು.ಅರ್ಜಿಯೊಂದಿಗೆ ಆಧಾರ ಕಾರ್ಡ್ಮಾ ಕ್ಸ್‌ಕಾರ್ಡ್ , ಸ್ಟಡಿ ಸರ್ಟಿಫಿಕೇಟ್ , ತಹಶೀಲ್ದಾರರಿಂದ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನಕಲು ಪ್ರತಿಗಳೊಂದಿಗೆ ಇದೇ ದಿ.  20 ರ ಸಂಜೆ 5 ಗಂಟೆ ಒಳಗಾಗಿ . ಅಧ್ಯಕ್ಷರು / ಕಾರ್ಯದರ್ಶಿ ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆ ( ಟ್ರಸ್ಟ )ಕಸಬಾ ಗೌಡರ ಓಣಿ,ಧಾರವಾಡ -580001 ಈ ವಿಳಾಸಕ್ಕೆ ಸಲ್ಲಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಸುಮಿತ್ರಾ ಬಡಿಗೇರ,ವಸಂತ ಕಿಲ್ವೆದ, ರಾಜೇಂದ್ರ ಮೇಸ್ತ್ರಿ, ಸೋಮಶೇಖರ ಅಕ೯ಸಾಲಿ, ನಾರಾಯಣ ಪತ್ತಾರ ಉಪಸ್ಥಿತರಿದ್ದರು.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *