Breaking News

ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದ ಶಿರಸ್ತೇದಾರ್….

ಶಿವಮೊಗ್ಗ: ತಾಲೂಕು ಕಚೇರಿ ಕಟ್ಟಡದಲ್ಲಿರುವ ಶಿರಸ್ತೇದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದೂವರೆ ಲಕ್ಷ ರೂ. ಹಣ ಸ್ವೀಕರಿಸುವಾಗ ಶಿರಸ್ತೇದಾರ್ ಅವರು ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಹಕ್ಕು ದಾಖಲೆ ಶಾಖೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ ಅವರ ಮೇಲೆ ಲೋಕಾಯುಕ್ತ ದಾಳಿಯಾಗಿದ್ದು, ಲೋಕಾಯುಕ್ತ ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ.

ಸಂದರ್ಭದಲ್ಲಿ ದಾಳಿ ನಡೆಸಿದರ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್ಪಿ ವಾಸುದೇವ್ ಅವರು, ಹನುಮಂತ ಬನ್ನಿಕೋಡ್ ಎಂಬುವರಿಗೆ ಸಂಬಂಧಿಸಿದ ಮನೆಯ ಖಾತೆ ಬದಲಾವಣೆಗೆ ಶಿರಸ್ತೇದಾರ್ ಜಿ. ಅರುಣ್ ಕುಮಾರ್ 3 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಹನುಮಂತ ಬನ್ನಿಕೋಡ್​ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *