Breaking News

ಜೆಸಿಬಿ ಮಷಿನ್‌ ತೆಗೆದುಕೊಂಡು ಬಂದು ಎಟಿಎಂ ಕಳ್ಳತನ…

ಶಿವಮೊಗ್ಗ:ಕಬ್ಬಿಣದ ರಾಡ್​, ಸುತ್ತಿಗೆ ಹಾಗು ಇತರೆ ಸಾಮಗ್ರಿ ಬಳಸಿ ಎಟಿಎಂ‌ ಒಡೆದು ಹಣ ಕಳ್ಳತನ ಮಾಡಿರುವ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಶಿವಮೊಗ್ಗದಲ್ಲೊಬ್ಬ ಚಾಲಾಕಿ ಕಳ್ಳ ಜೆಸಿಬಿ ಮಷಿನ್‌ ತೆಗೆದುಕೊಂಡು ಬಂದು ಎಟಿಎಂ ಕಳ್ಳತನಕ್ಕೆ ಬಂದಿದ್ದು, ಪೊಲೀಸರು ಬರುತ್ತಿರುವುದನ್ನು ಗಮನಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿನೋಬನಗರ ನಗರದಲ್ಲಿನ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಕಳ್ಳತನಕ್ಕೆ ಬಳಸಿದ ಜೆಸಿಬಿ ಶಿವಮೊಗ್ಗದ ವಿನೋಬನಗರ ನಗರದ ಮುಖ್ಯರಸ್ತೆಯ ಶಿವಾಲಯದ ಮುಂಭಾಗದ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಕಳ್ಳ ಜೆಸಿಬಿ ಬಳಸಿ ಎಟಿಎಂನ ಮುಂಭಾಗದ ಗಾಜು ಪುಡಿ ಮಾಡಿದ್ದಾನೆ. ಬಳಿಕ ಜೆಸಿಬಿಯ ಮುಂದಿನ ಬಕೆಟ್​ನಿಂದ​ ಎಟಿಎಂ‌ ಮಷಿನ್ ಎತ್ತಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಆದರೆ ಮಷಿನ್ ನೆಲದಿಂದ ಹೊರಕ್ಕೆ ಬಂದಿಲ್ಲ.

Share News

About BigTv News

Check Also

ಧಾರವಾಡನಲ್ಲಿ ಪ್ರತಿಭಟನೆಯ ಬೆನ್ನಲ್ಲೇ 24 ಸಾವಿರ ಹುದ್ದೆಗಳಿಗೆ ಮಂಜೂರಾತಿ…

ಬೆಂಗಳೂರು : ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ Dharwadನಲ್ಲಿ ಯುವಕರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜ್ಯ …

Leave a Reply

Your email address will not be published. Required fields are marked *