Breaking News


ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ  ಶಿಕ್ಷಕರಾಗಿ ತೃತೀಯಲಿಂಗಿಗಳು ಆಯ್ಕೆ


ರಾಯಚೂರು  : ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ  ಶಿಕ್ಷಕರಾಗಿ ತೃತೀಯಲಿಂಗಿಗಳು ಸಹ ಆಯ್ಕೆಯಾಗಿದ್ದಾರೆ. ನೀರಮಾನವಿ ಗ್ರಾಮದ ಅಶ್ವತ್ಥಾಮ (ಪೂಜಾ) ಆಯ್ಕೆಯಾದ ತೃತೀಯ ಲಿಂಗಿಯಾಗಿದ್ದಾರೆ .

ತೃತೀಯ ಲಿಂಗ ಮೀಸಲಾತಿಯನ್ನು  ಸರಿಯಾಗಿ ಸದ್ಬಳಕೆ ಮಾಡಿ ಕೊಂಡ ಅಶ್ವತ್ಥಾಮ, ರಾಜ್ಯ ಶಿಕ್ಷಣ ಇಲಾಖೆಯಿಂದ ಮಾರ್ಚ್ ತಿಂಗಳಲ್ಲಿ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದು ಆಯ್ಕೆಯಾಗಿದ್ರು.

ಅಧಿಕೃತ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು ಸಮಾಜ ವಿಜ್ಞಾನ ವಿಷಯದ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಗ್ರಾಮದ ಅಶ್ವತ್ಥಾಮ ( ಪೂಜಾ) 1 ರಿಂದ 10ನೇ ತರಗತಿಯವರೆಗೆ ನೀರಮಾನವಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಮಾನವಿ ಪಟ್ಟಣದಲ್ಲಿ ಪದವಿ ಪೂರ್ವ, ಪದವಿ ಶಿಕ್ಷಣ ಪಡೆದಿದ್ದಾರೆ.

Share News

About BigTv News

Check Also

ಅಯ್ಯೋ ಪಾಪ ಅಂದಿದ್ದೇ ತಪ್ಪಾಯ್ತು: ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಿತೆಯ ಸೋಗಿನಲ್ಲಿ ಒಂದು ಲಕ್ಷ ರೂ. ವಂಚನೆ!

ವಿದೇಶದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಕಾಲೇಜು ಶುಲ್ಕ ಪಾವತಿಸುವ ತುರ್ತು ಪರಿಸ್ಥಿತಿಯನ್ನು ಬಳಸಿಕೊಂಡು ಸೈಬರ್ ವಂಚಕರು ಬೆಂಗಳೂರಿನ ಕುಟುಂಬವೊಂದಕ್ಕೆ …

Leave a Reply

Your email address will not be published. Required fields are marked *