ಧಾರವಾಡ : ಪೀಠಾಧಿಪತಿ ನೇಮಕ ವಿಚಾರದಲ್ಲಿ ಧಾರವಾಡ ತಾಲೂಕಿನ ಗರಗ ಕಲ್ಮಠ ಸದ್ದು ಮಾಡುತ್ತಿದೆ. ಗರಗ ಮಡಿವಾಳೇಶ್ವರ ಮಠಕ್ಕೆ ಆಗಮಿಸಿದ ಪ್ರಶಾಂತ ದೇವರು ಸ್ವಾಮೀಜಿಗೆ ಗ್ರಾಮದ ಸರ್ವ ಧರ್ಮಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಪುಷ್ಪ ಮಳೆ ಗೈದರು.
ಹಿಂದೂ, ಮುಸ್ಲಿಂ, ಜೈನ ಸೇರಿದಂತೆ ಗರಗ ಗ್ರಾಮದ ಸರ್ವ ಜನರು ಧಾರವಾಡ ಗರಗ ಮಡಿವಾಳೇಶ್ವರ ಮಠದ ಆವರಣದಲ್ಲಿ ಪ್ರಶಾಂತ ದೇವರು ಸ್ವಾಮೀಜಿಗೆ ಜಯಕಾರ ಹಾಕಿ ಸ್ವಾಗತಿಸಿದರು.
ಗರಗ ಗ್ರಾಮಸ್ಥರು ಕುಂಭಮೇಳ, ಹೆಜ್ಜೆ ಮಜ್ಜಲು, ಭಜನೆ ಸೇರಿದಂತೆ ಆರತಿ ಹಿಡಿದು ಗರಗ ಮಡಿವಾಳೇಶ್ವರ ಪಟ್ಟಾಭಿಷೇಕ್ಕಾಗಿ ಪ್ರಶಾಂತ ದೇವರು ಸ್ವಾಮೀಜಿಯವರನ್ನು ಗ್ರಾಮದ ತುಂಬ ಮೆರವಣಿಗೆ ಮೂಲಕ ಕರೆತಂದ ದೃಶ್ಯಗಳು ಕಂಡುಬಂದವು.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಧಾರವಾಡ ಗರಗ ಮಡಿವಾಳೇಶ್ವರ ಮಠದ ಪೀಠಾಧಿಪತಿ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ಗರಗ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಲಿಂಗಾಯತ ಮಠಕ್ಕೆ ಜಂಗಮ ಪೀಠಾಧಿಪತಿ ನೇಮಕ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದ್ದು. ಪಂಚಮಸಾಲಿ ಲಿಂಗಾಯತ ಮಠಾಧೀಶರು ವಿರೋಧ ವ್ಯಕ್ತಪಡಿಸಿರುವುದು ಬಿಗುವಿನ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಠದ ಆವರಣದಲ್ಲಿ ಹಾಗೂ ಮೆರವಣಿಗೆಗೆ ಕಲ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





