Breaking News

ಹಾಡು ಹಗಲೇ ಜಳಪಿಸಿದ ಚಾಕು ಘಟನೆ ಸಂಬಂಧಿಸಿದಂತೆ ಮೂವರ ಬಂಧನ

ಹುಬ್ಬಳ್ಳ ; ಇಲ್ಲಿನ ಸಂತೋಷನಗರದ ಪಕ್ಕದಲ್ಲಿನ ಜಿ.ಕೆ ಸ್ಕೂಲ್‌ ಬಳಿಯಲ್ಲಿ ಸೋಮವಾರ ದಿವಸದಂದು ಚಾಕು ಇರಿತಕ್ಕೆ ಸಂಬಂಧಿಸಿದಂತೆ ಅಶೋಕ ನಗರದ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ. ಗೋಪನಕೊಪ್ಪದ ಡಂಬರ ಓಣಿಯ ನಿವಾಸಿಗಳಾದ ಭೀಮಪ್ಪ ಗೊಲ್ಲರ , ಕಿರಣ ಕಬ್ಬೇರ ಆರೋಪಿಗಳಾಗಿದ್ದು ಇವರು ಸೋಮವಾರ ಸಂಜೆ ಜಿ.ಕೆ . ಸ್ಕೂಲ್‌ ಹತ್ತಿರ ಗೆಳೆಯರ ಜೊತೆಗೆ ನಿಂತುಕೊಂಡ ಮೂವರು ಸ್ನೇಹಿತರು ಬೈಕ್‌ ವಿಚಾರವಾಗಿ ಜಗಳ ಪ್ರಾರಂಭವಾಗಿ ಏಕಾಏಕಿ ಕಿರಣ ಮತ್ತು ಭೀಮಪ್ಪ ಸೇರಿಕೊಂಡು ಗುರುಸಿದ್ದೇಶ್ವೇರ ಕಾಲೋನಿಯ ರೆಹಮಾನ್‌ ಬೇಪಾರಿ ಮೇಲೆ ಚಾಕು ಇರಿಯಲು ಮುಂದಾಗಿದ್ದಾರೆ. ಆಗ ತಕ್ಷಣ ರೆಹಮಾನ್‌ ಚಾಕು ಇರಿಯಲು ಮುಂದಾದವರ ಚಾಕುವನ್ನು ಕಸಿದು ವಾಪಾಸ್‌ ಇಬ್ಬರಿಗೂ ಚುಚ್ಚಿದ್ದಾನೆ . ಪರಿಣಾಮ ಕಿರಣ ಮತ್ತು ಭೀಮಪ್ಪ ಗೊಲ್ಲರ ಎಂಭಾತರಿಗೆ ಗಾಯಗಳಾಗಿದ್ದು ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ರೆಹಮಾನ್‌ ತಮ್ಮ ಮೇಲೆ ನೆಡದ ಹಲ್ಲೆ ಯತ್ನ ಕುರಿತು ದೂರು ನೀಡಿದ್ದು ಈ ದೂರಿನ ಆಧಾರದ ಮೇಲೆ ಚಾಕು ಇರಿಯಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಅಶೋಕ ನಗರದ ಪೋಲಿಸರು ಬಂಧಿಸಿದ್ದಾರೆ.

ಇನ್ನು ಈ ಘಟನಾ ಸಂಬಂಧ ಕಿರಣ ಮತ್ತು ಭೀಮಪ್ಪ ಕಡೆಯವರು ಪ್ರತಿದೂರು ನೀಡಲು ಮುಂದಾಗಿದ್ದು ಹೀಗಾಗಿ ಚಾಕು ಇರಿದು ಗಾಯಗೊಳಿಸಿದರುವ ರೆಹಮಾನ್‌ ಬೇಪಾರಿ ಎಂಬಾತನನ್ನು ಪೋಲಿಸರು ಬಂಧಿಸಲು ಮುಂಧಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲಿ ನಗರದಲ್ಲಿ ಈ ರೀತಿಯ ಘಟನೆಗಳು ದಿನದಿನೇ ಎಚ್ಚಾಗುತ್ತಿದ್ದು ಪೂಡಿ ರೌಡಿಗಳ ಹಾವಳಿ ಅವಳಿನಗರದಲ್ಲಿ ಪ್ರತಿದಿನ ಹೆಚ್ಚಾಗುತ್ತಿದೆ. ಆದ್ದರಿಂದ ಇನ್ನು ಮುಂದೆಯಾಧರು ಪೋಲಿಸ್‌ ಅಧಿಕಾರಿಗಳ ಗಮನಹರಿಸಿ ಪೂಡಿ ರೌಡಿಗಳಿಗೆ ಕಡಿವಾಣಹಾಕಬೇಕು

Share News

About BigTv News

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *