Breaking News

ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ, ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ: ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಕಾಂಗ್ರೆಸ್‌ ಸರಕಾರ ಯಾವುದೇ ಹೊಸ ಯೋಜನೆ ಮಾಡಿಲ್ಲ. ಹೊಸ ಗುದ್ದಲಿ ಪೂಜೆ, ಟೆಂಡರ್‌ ಆದರೆ ಕಮಿಷನ್‌ ವಿಚಾರ ಬರುತ್ತದೆ. ಹಳೆಯ ಬಾಕಿ ಕೆಲಸಗಳನ್ನೇ ಮುಂದುವರಿಸುವಾಗ ಕಮಿಷನ್‌ ವಿಚಾರವೇ ಬರಲ್ಲ. ನಾವು ಕಮಿಷನ್‌ ಕೇಳಿರುವ ಯಾವುದೇ ಪ್ರಕರಣಗಳಿಲ್ಲ,’’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ. ಮಾತನಾಡಿ, ‘‘ಬಿಬಿಎಂಪಿ ವಿಚಾರದಲ್ಲಿ ಬಂದಿರುವ ಆರೋಪ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಬೋಗಸ್‌ ಬಿಲ್‌ ಆಗಿದೆಯಾ ಎಂದು ತನಿಖಾ ತಂಡ ವಿಚಾರಣೆ ಮಾಡುತ್ತದೆ,’’ ಎಂದರು.

‘‘ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಿಐಡಿ ತನಿಖೆ ಯಾವ ಹಂತದಲ್ಲಿದೆ ಎಂದು ಹೇಳುವುದಕ್ಕೆ ಆಗಲ್ಲ. ಈ ಪ್ರಕರಣದ ವಿಚಾರದಲ್ಲಿ ಸರಕಾರ, ಮುಖ್ಯಮಂತ್ರಿ, ಪೊಲೀಸ್‌ ಇಲಾಖೆ 24 ಗಂಟೆ ಅಲರ್ಟ್‌ ಆಗಿದೆ. ಹೆಚ್ಚಿನ ತನಿಖೆಗೆ ಬೇಡಿಕೆ ಇತ್ತು. ಹೀಗಾಗಿ ಸಿಎಂ ಸಿಐಡಿಗೆ ಕೊಟ್ಟಿದ್ದಾರೆ. ಸಿಐಡಿ ತಂಡ ಕಾಲೇಜಿಗೆ ಭೇಟಿ ಕೊಟ್ಟಿದೆ. ಸಂತ್ರಸ್ತೆಯ ಜತೆ ಮಾತುಕತೆ ನಡೆಸಿದೆ. ತನಿಖೆ ಪ್ರಗತಿಯಲ್ಲಿದೆ,’’ ಎಂದರು. ‘‘ಕಾಂಗ್ರೆಸ್‌ ಮಹಿಳೆಯರಿಗೆ ಮರ್ಯಾದೆ ಕೊಡುವ ಸರಕಾರ. ಯಾವುದೇ ಸಮಾಜ, ಯಾರಿಗೆ ಅನ್ಯಾಯವಾದರೂ ನಾವು ಸಹಿಸಲ್ಲ. ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ,’’ ಎಂದರು.

‘‘ಪಬ್‌, ಹೋಟೆಲ್‌ಗಳ ಮೇಲೆ ದಾಳಿಯಾದರೆ ಬಿಜೆಪಿಗೆ ಏನು ಸಂಬಂಧ? ಬಿಜೆಪಿಯವರು ಹೇಗೆ ಟಾರ್ಗೆಟ್‌ ಆಗುತ್ತಾರೆ ಎಂದು ಬಿಡಿಸಿ ಹೇಳಿ. ಕಾಂಗ್ರೆಸ್‌ ಯಾರನ್ನೂ ಟಾರ್ಗೆಟ್‌ ಮಾಡಲ್ಲ. ಕಾನೂನು ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಲೈಸನ್ಸ್‌ ತೆಗೆದುಕೊಂಡು ಕ್ಲಬ್‌ ಪಬ್‌ ನಡೆಸುತ್ತಾರೆ. ಎಲ್ಲದಕ್ಕೂ ನಿಯಮ ಇರುತ್ತದೆ. ಸಮಯ ನಿಗದಿಯಾಗಿರುತ್ತದೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಯಾರೂ ವಿರೋಧ ಮಾಡುವುದಿಲ್ಲ. ಕಾಂಗ್ರೆಸ್‌’ಗೆ ಯಾರನ್ನೂ ಟಾರ್ಗೆಟ್‌ ಮಾಡುವ ಅನಿವಾರ್ಯ ಸ್ಥಿತಿಯಿಲ್ಲ,’’ ಎಂದರು

Share News

About BigTv News

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *