Breaking News

ಶಿವಲಿಂಗವನ್ನು ಕಿತ್ತೊಯ್ದು ವಿಕೃತಿ ಮೆರೆದ ಖದೀಮರು……

ಗಂಗಾವತಿ : ತಾಲೂಕಿನ ಮಲ್ಲಾಪುರ ಗ್ರಾಮದ ಸಮೀಪ ಇರುವ ಪುರಾತನ ಕಾಲದ ವಾಣಿ ವೀರಭದ್ರೇಶ್ವರ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಖದೀಮರು ಕದ್ದೊಯ್ದ ಘಟನೆ ಗುರುವಾರ ಬೆಳಕಿಗೆ ಬಂದಿದೆ. ನಿರ್ಜನ ಹಾಗೂ ಬೆಟ್ಟದ ಕಡಿದಾದ ಪ್ರದೇಶದಲ್ಲಿರುವ ಪೌರಾಣಿಕ ಹಿನ್ನೆಲೆಯ ದೇವಸ್ಥಾನದಲ್ಲಿ ಕಳೆದ ಹಲವು ದಶಕದಿಂದ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ.

ಇದೇ ಸಮಯಕ್ಕಾಗಿ ಕಾದಿದ್ದ ಖದೀಮರು ದೇಗುಲದ ಗರ್ಭಗುಡಿಯಲ್ಲಿದ್ದ ಪಾಣಿ ಬಟ್ಟಲು ಮೇಲಿನ ಶಿವಲಿಂಗವನ್ನು ಕಿತ್ತೊಯ್ದು ವಿಕೃತಿ ಮೆರೆದಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆ ಸಲ್ಲಿಸಿ, ಮಧ್ಯಾಹ್ನದ ಹೊತ್ತಿಗೆ ಮರಳಿ ಗಂಗಾವತಿಗೆ ಬರುತ್ತಾರೆ. ಎಂದಿನಂತೆ ಬೆಳಗ್ಗೆ ಅರ್ಚಕ ಪೂಜೆಗೆ ತೆರಳಿದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರು ಗಂಗಾವತಿ ಗ್ರಾಮೀಣ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *