ಹುಬ್ಬಳ್ಳಿ: ಶಾಂತಿಯುತವಾಗಿ ಪ್ರತಿಭಟನಾ ನಡೆಸುತ್ತಿದ್ದರು. ಆದರೇ ಧೀಡಿರ್ ಆಗಿ ರಸ್ತೆ ಬಂದ್ ಮಾಡಿದ್ದಾರೆ.ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದ್ರೆ ಆಗಿದೆ. ತಕ್ಷಣವೇ ಪ್ರತಿಭಟನಾಕಾರರನ್ನ ವಾಪಸ್ ಕಳಸಿ, ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದೇವೆ ಎಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಂದಿನ
ಒಂದು ಗಂಟೆಯಲ್ಲಿ ಪಾಲಿಕೆ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಲ್ಲಿಯವರೆಗೂ ಶಾಂತಿ ಕಾಪಾಡಿ ಎಂದು ಪ್ರತಿಭಟನಾಕಾರರಿಗೆ ಹೇಳಿದ್ದೇವೆ ಎಂದರು.ಧಿಡೀರಾಗಿ ರಸ್ತೆ ತಡೆ ನಡೆಸಿದ್ದಾರೆ, ಕಾನೂನು ಎಲ್ಲರಿಗೂ ಒಂದೇ. ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.ಎರಡೂ ದಿನದಿಂದ ಪಾಲಿಕೆ ಕಾರ್ಯ ಕಲಾಪಗಳಿಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು,ಎರಡೂ ದಿನದಿಂದ ಪಾಲಿಕೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

