ಬೆಂಗಳೂರು: ‘ರಾಹುಲ್‌ಗಾಂಧಿ ಅವರ ಪಾದಯಾತ್ರೆಗೆ ಒಂದು ದಿನ 5 ಸಾವಿರ ಜನರನ್ನು ಕಳುಹಿಸಲು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಕೇಳಿದರೆ ಆಗಲ್ಲ ಎನ್ನುತ್ತಾರೆ. ಐದು ವರ್ಷದಲ್ಲಿ ಒಂದು ದಿನವಾದರೂ ರಾಹುಲ್‌ಗಾಂಧಿ ಜತೆ ಕೆಲಸ ಮಾಡಲಾಗಲ್ಲ ಎಂದರೆ ಏನು ಮಾಡಬೇಕು.
ಈ ವಿಚಾರದಲ್ಲಿ ಯಾವ ಶಾಸಕರಿಗೂ ವಿನಾಯಿತಿ ನೀಡುವುದಿಲ್ಲ’ ಎಂದು ದೇಶಪಾಂಡೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮಲ್ಲಿ ಕೆಲವು ಶಾಸಕರಿದ್ದಾರೆ. 1 ದಿನ ಬಂದು ಕೆಲಸ ಮಾಡುವುದಕ್ಕೂ ಆಗಲ್ಲ ಎನ್ನುತ್ತಾರೆ. ನಾನು ದೇಶಪಾಂಡೆ ಅವರಿಗೆ 1 ದಿನ ಜನರನ್ನು ಕಳುಹಿಸಲು ಕೇಳಿದೆ. ಅವರು ಆಗುವುದಿಲ್ಲ ಎಂದರು. 5 ವರ್ಷದಲ್ಲಿ ಒಂದು ದಿನ ಆದರೂ ರಾಹುಲ್ ಗಾಂಧಿ ಜತೆ ಕೆಲಸ ಮಾಡಲು ಆಗಲ್ಲ ಎಂದರೆ ಏನು ಮಾಡುವುದು?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

