Breaking News

ಇಂಜಿನಿಯರ್ಸ್ ದಿನಾಚರಣೆ ಧಾರವಾಡ ನಗರದಲ್ಲಿ ಭವ್ಯ ಮೆರವಣಿಗೆ

ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್‌ಗಳ ದಿನಾಚರಣೆಯಲ್ಲಿ ವಿಶ್ವೇಶ್ವರಯ್ಯನವರ ಭಾವಚಿತ್ರದ ಮೆರವಣಿಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್, ಧಾರವಾಡ ಲೋಕಲ್ ಸೆಂಟರನವರು ಧಾರವಾಡದ ಪ್ರಮುಖ ರಸ್ತೆಗಳ ಮೂಲಕ ಕಲಾಭವನದಿಂದ ಡಿಸಿ ಕಂಪೌಂಡಿನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿಯ ಸರ್ ಎಂ ವಿಶ್ವೇಶ್ವರಯ್ಯ ಅವರ ಮೂರ್ತಿಯವರೆಗೆ ಭವ್ಯ ಮೇರವಣಿಗೆ ಜರುಗಿತು.

ವಾಲ್ಮಿಯ ಸೂಪರಿಂಟೆಂಡೆಂಟ್ ಇಂಜಿನಿಯರ .ಬಸವರಾಜ ಬಂಡಿವಡ್ಡರವರು ಜಗ್ಗಲಗಿಯನ್ನು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಈ ಮೆರವಣಿಗೆಯಲ್ಲಿ ಜಗ್ಗಲಗಿಯ ಮೇಳದೊಂದಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ್ಸ್ನ ಎಲ್ಲಾ ಇಂಜಿನಿಯರಗಳು, ಜೆಎಸ್ಎಸ್ ಐಟಿಐ ಕಾಲೇಜು ವಿದ್ಯಾರ್ಥಿಗಳು, ಐ ಜಿ ಎಮ್ ಗ್ರಾನೇಟ್ಸ ನ ಮಾಲೀಕರಾದ ದೀಪಕ ಕಟ್ಟಿ, ಜೆ ಕೆ ಸಿಮೆಂಟ್, ಜೆ ಎಸ್ ಡಬ್ಲ್ಯೂ ಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್ ನ ಮಾರ್ಕೆಟಿಂಗ್ ಆಫೀಸರಗಳು ಪಾಲ್ಗೊಂಡಿದ್ದರು.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *