Breaking News

ಯಶೋಭೂಮಿ ಮೊದಲ ಭಾಗ ಲೋಕಾರ್ಪಣೆ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ‘ಯಶೋಭೂಮಿ’ಯ (ಐಐಸಿಸಿ) ಮೊದಲ ಭಾಗ ಲೋಕಾರ್ಪಣೆ ಮಾಡಲಿದ್ದಾರೆ. ಈ ಬೃಹತ್ ಸಮಾವೇಶ ಇತ್ತೀಚೆಗೆ ಜಿ20 ಸಮಾವೇಶ ನಡೆದ ಕೇಂದ್ರ ಭಾರತ್​

ಮಂಟಪಕ್ಕಿಂತಲೂ ದೊಡ್ಡದು. ಇದು ವಿಶ್ವದ ಅತಿದೊಡ್ಡ MICE ಕೇಂದ್ರವಾಗಿದೆ. 1.07 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಈ ಪ್ರದರ್ಶನ ಸಭಾಂಗಣವನ್ನು ಪ್ರದರ್ಶನ, ವ್ಯಾಪಾರ ಮೇಳ ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ.ಪ್ರಧಾನಿ ಮೋದಿ ಇದೇ ವೇಳೆ, ದ್ವಾರಕಾ ಸೆಕ್ಟರ್-21ರಿಂದ ಯಶೋಭೂಮಿ ದ್ವಾರಕಾ ಸೆಕ್ಟರ್-25 ರವರೆಗೆ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ವಿಸ್ತರಣೆಯನ್ನೂ ಉದ್ಘಾಟಿಸಲಿದ್ದಾರೆ. ಹೊಸ ಯಶೋಭೂಮಿ ದ್ವಾರಕಾ ಸೆಕ್ಟರ್-25ರ ಒಂದು ಭೂಗತ ನಿಲ್ದಾಣವಾಗಿದ್ದು, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ಮತ್ತು ನವದೆಹಲಿ ರೈಲು ನಿಲ್ದಾಣದಂತಹ ಪ್ರಮುಖ ಸ್ಥಳಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *