Breaking News

ಬಿಜೆಪಿ ವಿರುದ್ಧ ಶೆಟ್ಟರ್ ವಾಗ್ದಾಳಿ…..

ಹುಬ್ಬಳ್ಳಿ: ಕೆಲವು ಕಡೆ ಹಣ ತಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ ಅನ್ನೋ ರೂಮರ್ ಇದೆಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದರು.ಕೆಲವೊಂದು ಕಡೆ ಸುದ್ದಿ ಹೊರಗೆ ಬರ್ತಿವೆ,ಕೆಲವೊಂದು ಕಡೆ ಹೊರಗೆ ಬರ್ತಿಲ್ಲ.ಟಿಕೆಟ್ ಕೊಡಿಸೋ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು, ಅಂದ್ರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು ಎಂದ ಶೆಟ್ಟರ್ ಹೇಳಿದರು ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡಿದಿದೆ ಅಂದ್ರೆ ಅದು ಬಿಜೆಪಿ ಪಕ್ಷಕ್ಕೆ ಬಂದು ನಿಲ್ಲತ್ತೆದೆ ಇದಕ್ಕೆ ಬಿಜೆಪಿ ನಾಯಕರು ಅಂತಹ‌ ಪದ್ದತಿ ಇಲ್ಲ ಎಂದು ಹೇಳುತ್ತಾರೆ.ಆದ್ರೆ ಮಾಹಿತಿ‌

ಪ್ರಕಾರ ಹಿಂದೂ ಕಾರ್ಯಕರ್ತರೇ ಡೀಲ್ ನಲ್ಲಿ ಇನ್ವಾಲ್ ಆಗಿದ್ದಾರೆ ಎಂದರು.ಇದು ಬಹಳ ಗಂಭೀರ ವಿಷಯವಾಗಿದೆ,ಇದನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.ಕನಕಗಿರಿಯಲ್ಲಿ‌ ಟಿಕೆಟ್ ಡೀಲ್ ವಿಷಯಕ್ಕೆ ‌ಕಂಪ್ಲೇಟ್ ಆಗಿದೆ,ಯಾವ ಹಿನ್ನಲೆಯಲ್ಲಿ ಇವೆಲ್ಲ ಹೊರಗೆ ಬರ್ತಿವೆ.ಇನ್ನು ಹಲವಾರು ಕಡೆ ಕಂಪ್ಲೇಟ್ ಆಗಬಹುದು ಎಂದ ಶೆಟ್ಟರ್ ‌ಹೇಳಿದರು.ಕಂಪ್ಲೇಟ್ ಕೊಡದೆ ಇರೋರು ಸಾಕಷ್ಟು ಜನ ಇರಬಹುದು ಯಾಕೆಂದರೆ ಅವರು ಧೈರ್ಯ ಮಾಡಿರಲಿಕ್ಕಿಲ್ಲ ಎಂದ ಶೆಟ್ಟರ್ ಮಾತು.ಕಳೆದ ಬಾರಿ ನಾನು ಹೇಳಿದ್ದೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಬಿಜೆಪಿ ಇದೆ ಎಂದು ಅದು ಇವಾಗ ಪ್ರೂವ್ ಆಗ್ತಿದೆ,ಬಿಜೆಪಿಯಲ್ಲಿ ಕಾಕಸ್ ತುಂಬಿದೆ ಎಂದ ಶೆಟ್ಟರ್ ‌ ಹೇಳಿದರು ಚುನಾವಣೆ ಬಂದ ರಿಜಲ್ಟ್ ಇದಕ್ಕೆ ಉತ್ತರವಾಗಿದೆ, ಹಿರಿಯರಿಗೆ ಟಿಕೆಟ್ ಕೊಡದೆ ಇರೋ ಪರಸ್ಥಿತಿ ನೋಡಿದಾಗ ಇಂತಹ ಪ್ರಕರಣ ಹೊರಗೆ ಬರತ್ತದೆ ಇದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.ವ್ಯಕ್ತಿ ನೋಡಿ ಟಿಕೆಟ್ ಕೊಡೋದು ಮೊದಲು ಚಾಲ್ತಿ ಇತ್ತು. ನಾನೇ ಎಷ್ಟೋ ಜನರಿಗೆ ಹಠ ಮಾಡಿ ಟಿಕೆಟ್ ಕೊಡಿಸಿದೀನಿ. ರಾಮದುರ್ಗದಲ್ಲಿ ರಿಯಲ್ ಎಸ್ಟೇಟ್ ವ್ಯಕ್ತಿಗೆ ಟಿಕೆಟ್ ಕೊಡ್ತಾರೆ. ಇದರ ಮೇಲೆ ಅರ್ಥ ಮಾಡಿಕೊಳ್ಳಿ ಎಂದ ಶೆಟ್ಟರ್ ಮಾತು. ಏನೋ ವ್ಯವಹಾರ ನಡಿದಿದೆ ಅನ್ನೋದಂತೂ ಸತ್ಯ,ಪ್ರಾಥಮಿಕ ಹಂತದಲ್ಲಿ ಹಣದ ವ್ಯವಹಾರ ನಡಿದಿದೆ ಅನ್ನೋದು ಸಾಬೀತಾಗಿದೆ..

ಚೈತ್ರಾ ಕುಂದಾಪೂರ ಅಪರಾಧಿ ಸ್ಥಾನದಲ್ಲಿ ‌ನಿಂತಿದಾರೆ. ಚೈತ್ರಾ ಕುಂದಾಪೂರ ಕೇಸ್ ಆದ ಮೇಲೆ ಕೆಲವರಿಗೆ ಧೈರ್ಯ ಬಂದಿದೆ ಎಂದ ಶೆಟ್ಟರ್ ಹುಬ್ಬಳ್ಳಿಯಲ್ಲಿ ಹೇಳಿದರು….

Share News

About Shaikh BigTv

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *