Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..!
ಮದುವೆಗೂ ಮುಂಚೆ ಜನಿಸಿದ್ದ ಮಗು ಕೊನೆಗೂ ಪತ್ತೆ: ಕಸಬಾಪೇಟ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ! Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..!
ಹುಬ್ಬಳ್ಳಿಯನ್ನು ಹಲವು ದಿನಗಳಿಂದ ಕಾಡುತ್ತಿದ್ದ ಮದುವೆಗೆ ಮುಂಚೆ ಜನಿಸಿದ್ದ ಮಗುವಿನ ರಹಸ್ಯ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ನಗರದಲ್ಲಿ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದಲ್ಲಿ ಎಲ್ಲರ ಮನಸ್ಸನ್ನೂ ಕಾಡುತ್ತಿದ್ದ ಪ್ರಶ್ನೆ ಒಂದೇ “ಆ ಮಗು ಎಲ್ಲಿದೆ..?

ಮದುವೆಗೆ ಮುಂಚೆಯೇ ಯುವತಿ ಮಗುವಿಗೆ ಜನ್ಮ ನೀಡಿದ್ದ ವಿಚಾರ ಬೆಳಕಿಗೆ ಬಂದಾಗ ನಗರವೇ ಬೆಚ್ಚಿಬಿದ್ದಿತ್ತು. ಬಳಿಕ ಮಗು ಕಾಣಿಸುತ್ತಿಲ್ಲ, ಮಗು ಯಾರ ಬಳಿ ಇದೆ, ಮಗುವಿಗೆ ಏನಾಯಿತು ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದವು…
ಈ ಪ್ರಕರಣದ ಬಗ್ಗೆ Big TV ಸುದ್ದಿ ಮಾಡಿದ ಕೆಲವೇ ಗಂಟೆಗಳಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇದುವರೆಗೆ ರಹಸ್ಯವಾಗಿದ್ದ ಮಗುವನ್ನು ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ…
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಕಸಬಾಪೇಟ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ, ಮಗುವಿನ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸರ ಈ ಚುರುಕಿನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ…
ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಪ್ರಕರಣ ಮತ್ತಷ್ಟು ಸಂಕೀರ್ಣವಾಗುತ್ತಿತ್ತು… ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ಹೊಸ ಪ್ರಶ್ನೆಗಳು ಮೂಡಿವೆ ಮಗು ಇಷ್ಟು ದಿನ ಯಾರ ಬಳಿ ಇತ್ತು..? ಮಗುವನ್ನು ಠಾಣೆಗೆ ತಂದವರು ಯಾರು? ಈ ಪ್ರಕರಣದ ಹಿಂದೆ ಇನ್ನೂ ಏನಾದರೂ ದೊಡ್ಡ ಸತ್ಯ ಇದೆಯೇ..?
ಒಟ್ಟಾರೆ, ಕಸಬಾಪೇಟ ಪೊಲೀಸರ ಸಮಯೋಚಿತ ಕ್ರಮ ಒಂದು ಮಗುವಿನ ಭವಿಷ್ಯವನ್ನು ಕಾಪಾಡಿದಂತಾಗಿದೆ, ಮತ್ತು ಅವರ ಕೆಲಸಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ…
ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಡಾಕ್ಟರ್ ಪಾತ್ರವೇನು..? ಪೊಲೀಸ್ ಠಾಣೆಗೆ ಮಗುವನ್ನು ತಂದುಕೊಟ್ಟ ಆ ಡಾಕ್ಟರ್ ಹಿಂದೆ ಇನ್ನೇನಾದರೂ ದೊಡ್ಡ ರಹಸ್ಯ ಇದೆಯಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ..!
bigtvnews | Hubli Dharwad News | Kannada News | Karnataka News Hubli News | News In Hubli | Local news

