ಹುಬ್ಬಳ್ಳಿ:ಹುಬ್ಬಳ್ಳಿಯ ಹೊಸೂರಿನ ಕಿರಾಣಿ ಅಂಗಡಿಯೊಂದರಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಕಾರಣ ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಇದೀಗ ಲಭ್ಯವಾಗಿದೆ.ಅಂಗಡಿಯವರು ಹೇಳುವ ಪ್ರಕಾರ ಪೊಲೀಸರೇ ಅಂಗಡಿಯೊಳಗೆ ಬಂದು ಗಾಂಜಾ ತಂದು ಇಟ್ಟಿದ್ದರು ಎಂಬ ಆರೋಪವನ್ನು ಅಂಗಡಿ ಮಾಲಕರು ಮಾಡಿದ್ದರು.ಆದ್ರೆ ಸಿಸಿ ಕ್ಯಾಮರಾದಲ್ಲಿ ಮಾತ್ರ ಪೊಲೀಸರು ಕೇವಲ ಅಂಗಡಿಯೊಳಗೆ ಇಟ್ಟಿದ್ದ ಗಾಂಜಾ ತರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿಗೆ ಹೋಗುವಾಗ ಬರಿಕೈಯಲ್ಲಿ ಹೋದವರು ಗಾಂಜಾದೊಂದಿಗೆ ಹೊರಗೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆಅಷ್ಟೇ ಅಲ್ಲದೆ ಈ ಪ್ರಕರಣವನ್ನು ಪೊಲೀಸರ ತಲೆಗೆ ಕಟ್ಟುವ ನಿಟ್ಟಿನಲ್ಲಿ ಕೆಲವೊಂದಿಷ್ಟು ಜನ ಮುಂದಾಗಿದ್ದು ರಹಸ್ಯೆವಾಗಿ ಉಳಿದಿಲ್ಲ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮರಾದ ಡಿವೈಸ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ಪ್ರಕರಣದಲ್ಲಿ ವಿನಾಕಾರಣ ಕೇಶ್ವಾಪುರ ಠಾಣೆಯ ಪೊಲೀಸರ ಹೆಸರನ್ನು ತಳುಕು ಹಾಕಿ ತಮ್ಮ ಗಾಂಜಾ ಮಾರಾಟ ದಂದೆಯನ್ನು ವೃದ್ಧಿಸಿಕೊಳ್ಳಲು ಈ ರೀತಿಯಾದ ಹುನ್ನಾರವನ್ನು ಮಾಡಲಾಗುತ್ತಿದೆ ಎಂಬ ಮಾತುಗಳು ಇದೀಗ ಕಂಡು ಬಂದಿದೆ.ಅಷ್ಟೇ ಅಲ್ಲದೇ ಪೊಲೀಸರ ಮೇಲೆ ವಿನಾಕಾರಣ ಈ ರೀತಿಯಾದ ಆರೋಪ ಬಂದ್ರೆ ಹೇಗೆ ಕೆಲಸ ಮಾಡಬೇಕು ಅಂತಾ ಹು-ಧಾ ಕಮಿಷನರೇಟ್ ನ ಕ್ರೈಂ ಸಿಬ್ಬಂದಿಗಳು ತಲೆಕೆಡಿಸಿಕೊಂಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮೀಷನರ್ ರೇಣುಕಾ ಮೇಡಂ ಸತ್ಯಾಸತ್ಯತೆ ಪರಿಶೀಲನೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ಪೊಲೀಸ ಸಿಬ್ಬಂದಿಗಳ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಬೇಕಿದೆ.
Check Also
68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!
ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …
bigtvnews | Hubli Dharwad News | Kannada News | Karnataka News Hubli News | News In Hubli | Local news

