ಅಸ್ತಿಗಾಗಿ ಗಂಡನಿಂದ ಹೆಂಡತಿಯ ಕೊಲೆ…?
ಧಾರವಾಡ: ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಸುಮಂಗಲ ಪ್ರವೀಣ್ ತಿಪ್ಪಣ್ಣವರ (30) ಎಂಬುವರು ಮನೆಯಲ್ಲಿನ ಕೊಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಅನುಮಾನಸ್ಪಾದ ರೀತಿಯಲ್ಲಿ ಅವರು ಸಾವನ್ನಪ್ಪಿದ್ದರು .
ಆದರೆ ಸತ್ತ ಮಹೀಳೆಯ ಕುಟುಂಬಸ್ಥರು ಮಾತ್ರ ನಮ್ಮ ಮಗಳನ್ನು ಆಕೆಯ ಪತಿ ಹಾಗೂ ಕುಟುಂಬ ಸದಸ್ಯರೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಕಲಘಟಗಿ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಇ ಹಿನ್ನೆಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತಳ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಮೃತ ಸುಮಂಗಲ ಅವರ ಪತಿ ಪ್ರವೀಣ್ ಬಸವಣ್ಣಪ್ಪ ತಿಪ್ಪಣ್ಣವರ್ (35) ಬಸವಣ್ಣಪ್ಪ ತಿಪ್ಪಣ್ಣವರ್ (65) ಚೆನ್ನವ್ವ ತಿಪ್ಪಣ್ಣವರ್ (55) ಮಹೇಶ್ ತಿಪ್ಪಣ್ಣವರ್ (38) ಅವರು ಬಂದಿತರಾಗಿದ್ದಾರೆ.

ಮೃತ ಸುಮಂಗಲ ಪತಿಯಾದ ಪ್ರವೀಣ್ ತಿಪ್ಪಣ್ಣವರ್ ಮತ್ತು ಅವರ ಕುಟುಂಬದವರು ನಾಲ್ಕು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಸುಮಂಗಲ ಅವರ ಕುಟುಂಬದವರು ತಿಳಿಸಿದ್ದಾರೆ.ಆದರೆ ಪಾಪಿ ಗಂಡ ತಲೆದಿಬಿನಿಂದ ಹೆಂಡತಿಯ ಉಸಿರು ನಿಲ್ಸೇ ಬಿಟ್ಟ.ಇದನ್ನ ಪೊಲೀಸರ ಮುಂದೆ ರಾಜಾರೋಷವಾಗಿ ಒಪ್ಪಿಕೊಂಡು ಪೊಲೀಸರ ಮುಂದೆ ವಿಕೃತಿ ಮೆರೆದಿದ್ದಾನೆ ಪಾಪಿ ಗಂಡ…? ಅವಳನ್ನು ಮೊದಲು ಹೊಡೆದು, ಆಮೇಲೆ ಕುತ್ತಿಗೆ ಹಿಚುಕಿ ಸಾಯಿಸಿದ್ದಾನೆ. ಅಸ್ತಿ ಸಂಬಂಧ ಹೊಡೆದು ಕೊಂದಿದ್ದಾರೆ ಎನ್ನಲಾಗಿದೆ. ವರದಕ್ಷಿಣೆ ಹಾಗೂ ಕೊಲೆ ಆರೋಪದಡಿ ಇವರನ್ನು ಬಂದಿಸಲಾಗಿದೆ. ಅಣ್ಣನ ಸಹಾಯ ಇದ್ದರೂ ತಾನೇ ಒಬ್ಬನೇ ಕೊಲೆ ಮಾಡಿರುವುದಾಗಿ ಪಾಪಿ ಗಂಡ ಹೇಳಿದ್ದಾನೆ.ಕಲಗಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಯ ಕೆಲಸಕ್ಕೆ ಸಾರ್ವಜನಿಕರು ಸಂತಸ ವ್ಯಕ್ತ ಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

