ಧಾರವಾಡ: ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜ, ಗೋಕರ್ಣ ಇವರ ಸಂಯುಕ್ತಾಶ್ರಯದಲ್ಲಿ ರಂಗಚಂದ್ರ ಪ್ರಶಸ್ತಿ ಪ್ರಧಾನ ಮತ್ತು ಜಾನಪದ ಕಲೆ / ಸಾಹಿತ್ಯಾಲೋಕನ ಕಾರ್ಯಕ್ರಮವನ್ನು ದಿ 30 ರಂದು ಗೋಕರ್ಣದ ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶನಿವಾರ ಬೆಳಿಗ್ಗೆ 9:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.
ಪ್ರತಿಷ್ಠಾನವು ಪ್ರತಿವರ್ಷ ಕೊಡಮಾಡುವ ರಂಗಚಂದ್ರ ಪ್ರಶಸ್ತಿ ಯನ್ನು ಈ ಬಾರಿ ಅಡಿಗೋಣದ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಭಾಗವತ ಬೀರಣ್ಣ ಮಾಸ್ತರ ಇವರಿಗೆ ನೀಡಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆನರಾ ಶಿಕ್ಷಣ ಪ್ರಸಾರಕ ಮಂಡಳಿಯ ಚೇರಮನ್ ಆದ ಡಾ. ವಿನಾಯಕ ಆ ಮಲ್ಲನ್ ಮಾಡುವರು. ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾದ್ಯಕ್ಷರು ಹಾಗೂ ಸಾಹಿತಿಗಳಾದ ಕೆ.ಎಚ್.ನಾಯಕ ವಹಿಸುವರು. ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯರು, ಖ್ಯಾತ ಜಾನಪದ ವಿದ್ವಾಂಸರಾದ ಡಾ. ಎನ್ ಆರ್ ನಾಯಕ, ಎಕ್ಸ ಗವರ್ನರ್ ಲಾಯನ್ಸ ಡಿಸ್ಟ್ರಿಕ್ಷ 317ಬಿ ಹಾಗೂ ಕೆ.ಪಿ.ಪ್ರ ಮಂಡಳಿ ಗೋಕರ್ಣ ಇದರ ಕಾರ್ಯದರ್ಶಿಗಳಾದ ಜಿ.ಎನ್ ನಾಯಕ ಆಗಮಿಸುವರು. ಕಾರ್ಯಕ್ರಮದಲ್ಲಿ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಗೋಕರ್ಣ,ದ ಪ್ರಾಚಾರ್ಯರಾದ ಎಸ್.ಸಿ. ನಾಯಕ, ಸಾಹಿತಿಗಳಾದ ವೆಂಟು ಮಾಸ್ತರ (ಶೀಳ್ಯ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಉಪಸ್ಥಿತರಿರುವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





