Breaking News

ಶುಗರ್ ಫ್ಯಾಕ್ಟರಿ’ಯಲ್ಲಿ ಡಾರ್ಲಿಂಗ್ ಕೃಷ್ಣ ಮಿಂಚಿಂಗ್ : ಯಾವಾಗ ರಿಲೀಸ್ ಆಗ್ತಿದೆ ಸಿನಿಮಾ?

ಹೊಸ ಹಾದಿಯತ್ತ ಹೊರಳಿಕೊಂಡಿರುವ ಕನ್ನಡ ಚಿತ್ರರಂಗದ ಪಾಲಿಗೀಗ ಒಂದಷ್ಟು ಭಿನ್ನ ವಿಭಿನ್ನ ಪ್ರಯತ್ನಗಳು, ಗೆಲುವುಗಳು ಜಮೆಯಾಗುತ್ತಿವೆ. ಈ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ಮತ್ತೊಂದಿಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ತಯಾರಾಗಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಅರ್ಹತೆಗಳನ್ನು ಅಡಕವಾಗಿಸಿಕೊಂಡಿರುವ ಚಿತ್ರ ಶುಗರ್ ಫ್ಯಾಕ್ಟರಿ.

ದೀಪಕ್ ಅರಸ್ ಸಾರಥ್ಯದ ಶುಗರ್ ಫ್ಯಾಕ್ಟರಿ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಪಾರ್ಟಿ ಪ್ರಿಯರಿಗೆ ಹೇಳಿ ಮಾಡಿಸಿದ ಹಾಡಿನ ಮೂಲಕ ಕಿಕ್ ಕೊಟ್ಟಿದ್ದ ಚಿತ್ರತಂಡವೀಗ, ತ್ರಿಕೋನ ಪ್ರೇಮಕಥೆ ಹೂರಣದ ಮೊದಲ ನೋಟವನ್ನು ಪ್ರೇಕ್ಷಕರ ಮುಂದೆ ತೆರೆದೆಟ್ಟಿದೆ. ಪ್ರೀತಿ ಕಥೆ ವ್ಯಥೆಯ ಶುಗರ್ ಫ್ಯಾಕ್ಟರಿಯಲ್ಲಿ ಮೂವರು ಬ್ಯೂಟಿಫುಲ್ ಬೊಂಬೆಗಳಾದ ಸೋನಲ್, ರುಹಾನಿ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಜೊತೆ ಡಾರ್ಲಿಂಗ್ ಕೃಷ್ಣ ಮಿಂಚಿದ್ದಾರೆ.

ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿರುವ ಶುಗರ್ ಫ್ಯಾಕ್ಟರಿಯನ್ನು ದೀಪಕ್ ಅರಸ್, ಬಹಳ ರೀಚ್ ಆಗಿ ಕಟ್ಟಿಕೊಟ್ಟಿದ್ದಾರೆ. ಬಾಲಮಣಿ ಪ್ರೊಡಕ್ಷನ್ ನಡಿ ಗಿ ರೀಶ್ ಆರ್ ಚಿತ್ರಕ್ಕೆ ಹಣ ಹಾಕಿದ್ದು, ಕಬೀರ್ ರಫಿ ಮ್ಯೂಸಿಕ್ ಮಸ್ತಿ ಟ್ರೇಲರ್ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಶುಗರ್ ಫ್ಯಾಕ್ಟರಿ ಸಿನಿಮಾವನ್ನು ಗೋವಾ, ಬೆಂಗಳೂರು, ಮೈಸೂರು, ಹಾಗೂ ಕಜಾಕಿಸ್ತಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದ್ಧೂರಿಯಾಗಿ ಚಿತ್ರ ಮೂಡಿಬಂದಿರುವುದು ಟ್ರೇಲರ್ ನಲ್ಲಿ ಗೊತ್ತಾಗ್ತಿದೆ. ಕೆಎಂ ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜಿ ಛಾಯಾಗ್ರ

Share News

About BigTv News

Check Also

ಹುಬ್ಬಳ್ಳಿ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ಅಧಿಕಾರಿಗಳ ದಾಳಿ

ಹಾಡು ಹಗಲೆ ಸಿಲಿಂಡರ್ ರಿಪೀಲ್ಲಿಂಗ್ ದಂಧೆ ನಡೆಯುತ್ತಿದೆ.ಅಡ್ಡೆಯ‌ ಮೇಲೆ ತಹಶೀಲ್ದಾರ್ ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಇಂದು ದಾಳಿ …

Leave a Reply

Your email address will not be published. Required fields are marked *