ಬಳ್ಳಾರಿ: ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಮಹಿಳೆಯೋವ೯ಳಿಗೆ ಕಥ೯ವ್ಯ ನೆಪದಲ್ಲಿ ಪೊಲೀಸ್ ಪೇದೆಯೊವ೯ ನಿರಂತರ ಕಿರುಕುಳ ನೀಡಿರುವ ಹಿನ್ನಲೆಯ ಆರೋಪದಡಿ ಪೊಲೀಸ್ ನ ಪೋಲಿ..ಗಿರಿವಿರುದ್ಧ ತೀವ್ರ ಆಕ್ರೋಶಗೊಂಡ ಸಾವ೯ಜನಿಕರು ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಕೂಡ್ಲಿಗಿ ಪಟ್ಟಣದಲ್ಲಿ ಜರುಗಿದೆ.ದೂರುದಾರರ ಹೇಳಿಕೆ:ಕೂಡ್ಲಿಗಿ ಠಾಣೆಯಲ್ಲಿ ಕಥ೯ವ್ಯ ನಿವ೯ಹಿಸುತ್ತಿರುವ ಮಂಗಾಪುರ ಎಂ.ಎಂ.ಬಸವರಾಜಸ್ವಾಮಿ ಎಂಬ ಪೇದೆಯು ವಿಚಾರಣೆ ನೆಪದಲ್ಲಿ ತಮ್ಮ ಮನೆಗೆ ಬಂದು ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ತೇಜೋವಧೆ ಮಾಡೋ ಉದ್ದೇಶದಿಂದ ತೀರಾ ದೌಜ೯ನ್ಯ ಹಾಗೂ ಪೋಲೀತನದಿಂದ ಹಾಗು ದುನ೯ಡತೆಯಿಂದ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆಂದು ನೊಂದ ಮಹಿಳೆಯೋವ೯ಳು ನೆರೆ ಹೊರೆಯವರ ನೆರವಿನೊಂದಿಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿರುವ ಘಟನೆ ಜರುಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.ಪೊಲೀಸ್ ಪೇದೆಯು ವಿಚಾರಣೆ ನೆಪದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಉದ್ದೇಶ ಪೂವ೯ಕವಾಗಿ ತಾವಿಲ್ಲದ ಸಂದಭ೯ಗಳಲ್ಲಿಯೇ ತಮ್ಮ ಮನೆಗೆ ಬಂದು ಮನೆಯ ಮಹಿಳೆಯರೊಂದಿಗೆ ಸದಸ್ಯರೊಂದಿಗೆ ದಫ೯ದಿಂದ.ಉಧ್ಧಟತನದಿಂದ ಹಾಗೂ ದೌಜ೯ನ್ಯ ಮತ್ತು ಪೋಲೀ ಮಾತುಗಳಿಂದ ದುನ೯ಡತೆಯಿಂದ ವತಿ೯ಸುತ್ತಿದ್ದು.ವಿಚಾರಣೆ ನೆಪದಲ್ಲಿ ಸಾವ೯ಜನಿಕ ಸ್ಥಳಗಳಲ್ಲಿ ಎಲ್ಲರೆದುರು ದುಂಡಾವತ೯ನೆ ನಿರಂತರ ತೋರುತ್ತಲೇಬಂದಿದ್ದು. ಪೋಲೀ ಪೇದೆ ಬಸವರಾಜಸ್ವಾಮಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕು ಹಾಗೂ ಬೇರೆಡಗೆ ವಗಾ೯ಯಿಸಬೇಕೆಂದು ಸಾವ೯ಜನಿಕರು ಒತ್ತಾಯಿಸಿ ಉನ್ನತಾಧಿಕಾರಿಗಳು ಶಿಸ್ಥು ಕ್ರಮ ಜರುಗಿಸ ಬೇಕೆಂದು ಸಾವ೯ಜನಿಕರು ಆಗ್ರಹಿಸಿದ್ದಾರೆ.ಹಲವುಬಾರಿ ಕಥ೯ವ್ಯದ ನೆಪದಲ್ಲಿ ಮಧ್ಯ ಸೇವಿಸಿ ತಮ್ಮ ಮನೆಗೆ ಬಂದು ದೌಜ೯ನ್ಯ ಎಸಗಿದ್ದು ನೆರೆಹೊರೆಯ ಸಾವ೯ಜನಿಕರೇ ಅದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ನೊಂದ ಮಹಿಳೆಯ ಪತಿ ಡೊಂಬರ ಸೋಮು ದೂರಿದ್ದಾರೆ.ಕಥ೯ವ್ಯದಲ್ಲಿದ್ದಾಗಲೇ ಮಧ್ಯ ಸೇವಿಸಿ ಸಾವ೯ಜನಿಕವಾಗಿ ದುನ೯ಡತೆ ತೋರಿರುವ ನಿದಶ೯ನಗಳಿದ್ದು ಶಿಸ್ಥಿನ ಇಲಾಖೆಯಲ್ಲಿ ಇಂತಹ ಅಶಿಸ್ಥಿನ ಸಿಬ್ಬಂಧಿಯಿಂದಾಗಿ ಠಾಣೆಗೇ ಕೆಟ್ಟಹೆಸರು ಬರುವಂತಾಗಿದ್ದು ಕೂಡಲೇ ಅಮಾನತ್ತುಗೊಳಿಸಬೇಕು ಮತ್ತು ವಗಾ೯ಯಿಸಬೇಕಾಗಿದೆ ಬ್ರಷ್ಠಅಧಿಕಾರಿಗಳು ತಲೆಮಾಸಿರೋ ಪ್ರಭಾವಿಗಳು ಇಂತಹ ಪೋಲಿಗಳ ರಕ್ಷಣೆಗೆ ನಿಂತರೆ ಮುಂದಿನ ದಿನಗಳಲ್ಲಿ ಅವರ ನಿಜಬಣ್ಣ ಬಯಲಿಗೆ ಬರೋದರಲ್ಲಿ ಸಂಧೇಹವಿಲ್ಲ ಹಾಗೂ ಉನ್ನತಾಧಿಕಾರಿಗಳ ಲ್ಲಿ ದೂರು ನೀಡಲಾಗುದು ಕಾರಣ ಶೀಘ೯ವೇ ನಿಧಾ೯ಕ್ಷಿಣ್ಯ ಶಿಸ್ಥು ಕ್ರಮ ಜರುಗಿಸಬೇಕೆಂದು ನೊಂದ ಮಹಿಳೆಯ ಕುಟುಂಬಸ್ಥರು ಹಾಗೂ ಸಾವ೯ಜನಿಕರು ಆಗ್ರಹಿಸಿದ್ದಾರೆ.ವರದಿ: ವಿ.ಜಿ.ವೃಷಭೆಂದ್ರ ಕೂಡ್ಲಿಗಿ-9008937428*
bigtvnews | Hubli Dharwad News | Kannada News | Karnataka News Hubli News | News In Hubli | Local news





