ಬೇಕ್ನ ಕೇಕ್ ತಯಾರಿಸುವ ಕಂಪನಿಯ ಹೈಡ್ರಾಲಿಕ್ ಲಿಫ್ಟ್ನಲ್ಲಿ ಹೋಗುತ್ತಿದ್ದಾಗ ತಲೆಗೆ ಪೆಟ್ಟು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಟ್ಟಹಲಸೂರು ಗ್ರಾಮದ ಭೂಪೇಂದ್ರ ಚೌಧರಿ (19) ಮೃತ ಯುವಕ.ಕಟ್ಟಡದಲ್ಲಿ ಹೈಡ್ರೋಲಿಕ್ ಲಿಫ್ಟ್ ಅಪರೇಟ್ ಮಾಡುತ್ತಿದ್ದ ಬಿ.ಕೆ.ಲಕ್ಷ್ಮೀ, ಕಂಪನಿಯ ಮೇಲುಸ್ತುವಾರಿ ರಾಜಶೇಖರ್ ಸೇರಿ ಇತರರ ವಿರುದ್ಧ ಚಿಕ್ಕಜಾಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

