ಮಾಜಿ ಕ್ರಿಕೆಟಿಗರು ಈ ಬಾರಿ ಪ್ರಶಸ್ತಿ ಗೆಲ್ಲಬಲ್ಲ ಹಾಗೂ ಸೆಮಿಫೈನಲ್ಸ್ ತಪುಪಬಲ್ಲ ತಂಡಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಶ್ರೀಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಅವರು ಈ ಬಾರಿ ಸೆಮಿಫೈನಲ್ಸ್‌ಗೆ ಲಗ್ಗೆ ಇಡಬಲ್ಲ ತಮ್ಮ ನೆಚ್ಚಿನ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ಮುತ್ತಯ್ಯ ಮುರಳಿಧರನ್ ಅವರ 800 ಬಯೋಪಿಕ್ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಂಡಿಯಾ ಟುಡೇ ಜೊತೆ ಮಾತನಾಡಿದ ಮುತ್ತಯ್ಯ ಮುರಳಿಧರನ್ ಅವರು, ತಮ್ಮ ಸಿನಿಮಾ ಬಗ್ಗೆ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಗ್ರ ನಾಲ್ಕರ ಹಂತಕ್ಕೆ ತಲುಪಬಲ್ಲ ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ನನಗೆ ತುಂಬಾ ಖುಷಿಯಾಗುತ್ತಿದೆ ಹಾಗೂ ಸಂತೋಷವಾಗುತ್ತಿದೆ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಬಯೋಪಿಕ್ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಪ್ರತಿಯೊಬ್ಬರು ನನ್ನ ಬಯೋಪಿಕ್ ಸಿನಿಮಾ ನೋಡಲಿದ್ದಾರೆಂದು ಭಾವಿಸುತ್ತೇನೆ. ನಾನು ಸ್ಪಾಯ್ಲರ್ ನೀಡಲು ಬಯಸುವುದಿಲ್ಲ, ಆದರೆ ಇದು ಸಂಪೂರ್ಣವಾಗಿ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಆಧರಿಸಿಲ್ಲ. ಶೇ. 20 ರಷ್ಟು ಕ್ರಿಕೆಟ್ ಸ್ಟೋರಿಯಾಗಿದ್ದರೆ, ಇನ್ನುಳಿದ ಶೇ. 80 ರಷ್ಟು ಮಾನವಿಯ ಆಧಾರಿತ ಕಥೆಯಾಗಿದೆ. ನನ್ನ ಜೀವನದಲ್ಲಿ ನಾನು ಎದುರಿಸಿದ ಅಡೆತಡೆಗಳು ಮತ್ತು ಅದನ್ನು ನಾನು ಹೇಗೆ ನಿವಾರಿಸಿದೆ ಎಂಬುದರ ಬಗ್ಗೆ ಇದೆ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news





