ಕೂಡಲಸಂಗಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸೇರಿದ ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮಿ ಇರುವ ಪೀಠದ ಕಟ್ಟಡದ ಗೇಟಿಗೆ ಭಾನುವಾರ ರಾತ್ರಿ ಬೀಗ ಹಾಕಲಾಗಿದೆ. ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಪೀಠದ ಕಟ್ಟಡದ ಪ್ರವೇಶ, ಹಿಂಬದಿ ದ್ವಾರ ಮತ್ತು ಮೇಲ್ಭಾಗದ ಕೊಠಡಿಗೆ ತೆರಳಲು ಇದ್ದ ದಾರಿಯಲ್ಲಿ ಗೇಟ್ ಅಳವಡಿಸಿ, ಬೀಗ ಹಾಕಲಾಗಿದೆ.ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಮಾಡಿಸಿ, ಬೀಗ ಹಾಕಲಾಗಿದೆ. ಮಠದ ಟ್ರಸ್ಟ್ ಅಧ್ಯಕ್ಷನಾಗಿರುವ ಕಾರಣ ಮಠದ ಸುರಕ್ಷತೆ ನನ್ನ ಜವಾಬ್ದಾರಿ. ಸ್ವಾಮೀಜಿಗೆ ಹೇಳಿ ಮಾಡುವಂತದ್ದಲ್ಲ. ಭದ್ರತೆ ದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ’ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

