ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ತಾಪ್ತ ಬಾಲಕರೊಂದಿಗೆ ಲೈಂಗಿಕೆ ಕ್ರಿಯೆಯಲ್ಲಿ ತೊಡಗಿ ವಿಡಿಯೋ ಮಾಡ್ತಿದ್ದ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಕುಕ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಇದೆಂತಾ ಗತಿ ಇದೆ ನೋಡಿ ನಮ್ಮ ದೇಶಕ್ಕೆ. ಇಂತ ಕಾಮುಕರಿಂದ ಎಷ್ಟೋ ಮಕ್ಕಳ ಜೀವನ ಹಾಳಾಗತಿದೆ.ಇಂತ ಕಾಮುಕರಿಂದ ಮಕ್ಕಳನ್ನು ಕಾಪಾಡೋದಾರು ಹೇಗೆ.

ಹುಬ್ಬಳ್ಳಿಯ ಹೊಸೂರ ಬಳಿ ಇರುವ ಪ್ರತಿಷ್ಠಿತ ಹೊಟೆಲ್ ನಲ್ಲಿ ಕೆಲಸ ಮಾಡತಿದ್ದ ಒರಿಸ್ಸಾ ಮೂಲದ ಕುಕ್ ಒಬ್ಬನ ಕಾಮದಾಟ ಬಯಲು. ಇವನು ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದ, ಅಷ್ಟೇ ಅಲ್ದೆ ಈ ಕುಕ್ ಮಕ್ಕಳನ್ನು ಬೆತ್ತಲೆ ಮಾಡಿ ತಾನೇ ವಿಡಿಯೋ ಮಾಡಿ ಹಣಕ್ಕೆ ಮಾರಾಟ ಮಾಡ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿಯ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸ ಮಾಡ್ತಿದ್ದ ಈ ಕುಕ್, ಅಪ್ತಾಪ್ತ ಮಕ್ಕಳ ಟಾರ್ಗೆಟ್ ಮಾಡಿ ಚಾಕಲೇಟ್, ಹಣದ ಆಸೆ ತೋರಿಸಿ ಮಕ್ಕಳೊಂದಿಗೆ ಕಾಮದಾಟ ಆಡಿ ವಿಡಿಯೋ ಮಾಡ್ತಿದ್ದ ಕಾಮುಕ.ಸದ್ಯ ಕಾಮುಕನಿಗೆ ಥಳಿಸಿ ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಸಧ್ಯ ಈ ಕಾಮುಕ ಹಳೇ ಹುಬ್ಬಳ್ಳಿ ಪೊಲೀಸ್ ವಶದಲ್ಲಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

