ಹೇಳುವವರು ಇಲ್ಲ.. ಕೇಳುವವರೂ ಇಲ್ಲ ಆಡಿದ್ದೇ ಆಟ….
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಇನ್ಸ್ ಪೆಕ್ಟರ್ ಗಳು ತಾವು ಮಾಡಿದ್ದೆ ಸರಿ ಅದೇ ಪೊಲೀಸ್ ನಿಯಮ ಎನ್ನುವಂತ ವರ್ತನೆ ಇದೀಗ ಶುರು ಮಾಡಿದ್ದಾರೆ.ಕಾನೂನು ಮತ್ತು ವ್ಯವಸ್ಥೆ ಹೆಸರಿನಲ್ಲಿ ಈಗಾಗಲೇ ನಕಲಿ FIR ಗಳನ್ನು ದಾಖಲಿಸಿ ಸಾಕಷ್ಟು ಅಮಾಯಕರನ್ನು ಜೈಲಿಗೆ ಅಟ್ಟಿದ್ದಲ್ಲದೆ ಕೆಲವರನ್ನ ಠಾಣೆಗೆ ಬರುವುದಕ್ಕಿಂತ ಮುಂಚೆಯೇ

ಜಾಮೀನು ನೀಡಿ ರಕ್ಷಣೆ ಮಾಡಿದ್ದು ಇದೆ ಅವಳಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಗಳಲ್ಲಿ ಒಬ್ಬರು ಎನ್ನುವುದು ಸತ್ಯ ಸಂಗತಿ ಆಗಿದ್ದು ಇದೆ.ಸಾರ್ವಜನಿಕರು ಸಾಮಾನ್ಯ ನಾಗರಿಕರು ನ್ಯಾಯ ಕೇಳಲು ಹೋಗುವ ಆರಕ್ಷಕರು ಇದೀಗ ಹುಬ್ಬಳ್ಳಿಯ ಖ್ಯಾತ ರೌಡಿಗಳು ಕ್ರಿಮಿನಲ್ ಜೊತೆ ಸಂಬಂಧ ಇಟ್ಟುಕೊಂಡಿದ್ದಲ್ಲದೆ ಪರಸ್ಪರ ಗೌರವಿಸುತ್ತಾ ಸನ್ಮಾನಿಸುವ ಹಂತಕ್ಕೆ ತಮ್ಮ ಅನುಬಂಧವನ್ನು ವಿಸ್ತರಿಸಿದ್ದಾರೆ ಇದರಿಂದ ದೌರ್ಜನ್ಯಕ್ಕೆ ಒಳಗಾದ ನಾಗರಿಕರು ಅದ್ಯಾವ ಭರವಸೆಯಿಟ್ಟು ಈ ಆರಕ್ಷಕರ ಬಳಿ ನ್ಯಾಯ ಕೇಳಲು
ಹೋಗಬೇಕು ಎನ್ನುವುದು ಪ್ರಶ್ನಾರ ಪ್ರಶ್ನೆಯಾಗಿದೆ.ಹುಬ್ಬಳ್ಳಿಯ ಅತಿ ಸೂಕ್ಷ್ಮ ಪೊಲೀಸ್ ಠಾಣೆಯ ಅಧಿಕಾರಿಗಳ ಈ ವರ್ತನೆಗೆ ಇದುವರೆಗೂ ಇಲಾಖೆಯ ಉನ್ನತ ಅಧಿಕಾರಿಗಳು ಬ್ರೇಕ್ ಹಾಕುವಲ್ಲಿ ವಿಫಲರಾಗಿದ್ದು, ಪಾರದರ್ಶಕ, ಜನಸ್ನೇಹಿ , ಎನ್ನುವ ಪೊಲೀಸಿಂಗ್ ವ್ಯವಸ್ಥೆ ಅವಳಿ ನಗರದಲ್ಲಿ ಇಲ್ಲ ಎನ್ನುವುದು ಇದೀಗ ಸ್ಪಷ್ಟವಾಗುತ್ತಿದೆ. ಒಬ್ಬ ಪೊಲೀಸರಿಂದ ಇಡೀ ಇಲಾಖೆಗೆ ಕಪ್ಪು ಚುಕ್ಕೆ ಇದಾಗಿದೆ. ಇಂತಹ ಅಧಿಕಾರಿಗಳಿಂದ ಏನು ಮಾಡಲು ಸಾಧ್ಯ.ಸದ್ಯ ಇಂತಹದೇ ಒಂದು ಘಟನೆ ಬಗ್ಗೆ ಬಿಗ್ ಟಿವಿ ಸಾಕ್ಷಿ ಸಮೇತ ಸರಣಿಯಾಗಿ ಸುದ್ದಿ ಪ್ರಕಟಿಸಲಿದ್ದು ಇನ್ನಾದರೂ ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.

bigtvnews | Hubli Dharwad News | Kannada News | Karnataka News Hubli News | News In Hubli | Local news

