ಬೆಂಗಳೂರು: ಪಂಚರಾಜ್ಯಗಳ ಚುನಾವಣೆಗೆ ಗುತ್ತಿಗೆದಾರರ ಮೂಲಕ ಹಣ ಸಂಗ್ರಹ ಎಂದು ಮುನಿರತ್ನ ಆರೋಪಕ್ಕೆ ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.
ಮುನಿರತ್ನ ಅವರು ಆರೋಪ ಮಾಡಿದ್ರೆ ಮಾಡಬಹುದು. ಐಟಿ ರೇಡ್ ಗೂ, ಸರ್ಕಾರಕ್ಕೂ ಏನು ಸಂಬಂಧ ಬಿಜೆಪಿ ಸರ್ಕಾರ ಬಂದ ಮೇಲೆ 500 ರೈಡ್ ಆಗಿದೆ, ಅದಕ್ಕೂ ಕಾಂಗ್ರೆಸ್ ಸಂಬಂಧ ಇಲ್ಲ. ಐಟಿ ಡಿಪಾರ್ಟ್ಮೆಂಟ್ ಇದೆ, ರೈಡ್ ಆದವರು ಇದಾರೆ. ಅವರವರ ಮಧ್ಯೆವಿರುವ ವ್ಯವಸ್ಥೆ ಅದು, ಅದನ್ನ ನಮಗೆ ಕನೆಕ್ಟ್ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಯಾರ ಮನೆ ಮೇಲೆ ರೈಡ್ ಆಗಿದೆ ಎಂದು ಪ್ರಶ್ನೆ. ಗುತ್ತಿಗರದಾರರಾ ಅವರು? ಗುತ್ತಿಗೆದಾರರ ಮೇಲೆ ಆಗಿರಬಹುದು, ಸಾಕಷ್ಟು ಜನ ಗುತ್ತಿಗೆದಾರರು ಎಕೋ ಫ್ರೆಂಡ್ಲಿ ಇರ್ತಾರೆ. ಎಲ್ಲಾ ಪಕ್ಷಗಳ ಜೊತೆ ಗುತ್ತಿಗೆದಾರರು ಚೆನ್ನಾಗಿ ಇರ್ತಾರೆ, ಅದಕ್ಕೂ ನಮಗೂ ಸಂಬಂಧ ಇಲ್ಲ. ಡಿಪಾರ್ಟ್ಮೆಂಟ್ ಹಾಗೂ ಅವರ ಮಧ್ಯೆ ಇರುವ ವಿಚಾರ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





