ಈ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಪ್ರಭಾಸ್ ‘ಸಲಾರ್’ ಹಾಗೂ ಶಾರುಖ್ ಖಾನ್ ‘ಡಂಕಿ’ ಸಿನಿಮಾಗಳ ರಿಲೀಸ್ ಡೇಟ್ ಘೋಷಿಸಲಾಗಿದೆ. ಎರಡೂ ಕೂಡ ದೊಡ್ಡ ಸಿನಿಮಾಗಳೇ ಆಗಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಭಾರೀ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ. ಡಿಸೆಂಬರ್ 22ಕ್ಕೆ ಎರಡೂ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡಗಳು ಘೋಷಿಸಲಾಗಿದೆ.
ಈ ವರ್ಷ ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಪೋಸ್ಟ್‌ಪೋನ್ ಆಗಿದ್ದೇ ಇಷ್ಟೆಲ್ಲಾ ಚರ್ಚೆ ಕಾರಣವಾಗಿದೆ. ಕಳೆದ ವರ್ಷ ಬರಬೇಕಿದ್ದ ‘ಸಲಾರ್’ ಈ ವರ್ಷಕ್ಕೆ ಪೋಸ್ಟ್‌ಪೋನ್ ಆಗಿತ್ತು. ಆದರೆ ಗ್ರಾಫಿಕ್ಸ್ ವರ್ಕ್ ಚೆನ್ನಾಗಿ ಆಗಲ್ಲ ಎಂದು ಮತ್ತೆ 3 ತಿಂಗಳ ಸಿನಿಮಾ ರಿಲೀಸ್ ಮುಂದೂಡಲಾಯಿತು. ಆದರೆ ಬಹಳ ಹಿಂದೆಯೇ ಡಿಸೆಂಬರ್ 22ಕ್ಕೆ ‘ಡಂಕಿ’ ಸಿನಿಮಾ ರಿಲೀಸ್ ಘೋಷಿಸಿದ್ದ ಶಾರುಖ್ ಖಾನ್‌ಗೆ ಶಾಕ್ ಆಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news





