Breaking News

ಜರ್ಮನಿ ಕಂಪನಿಗಳು ರಾಜ್ಯದ ಕೈಗಾರಿಕಾ ಸಾಮರ್ಥ್ಯ ಹೆಚ್ಚಿಸಲು ತಮ್ಮದೇ ಕಾಣಿಕೆ ನೀಡುತ್ತಿವೆ….

ಬೆಂಗಳೂರು: ತಯಾರಿಕಾ ವಲಯವಾಗಿ ಬೆಳೆಯುವ ಗುರಿ ಹೊಂದಿರುವ ಕರ್ನಾಟಕ ಸರ್ಕಾರವು ಜರ್ಮನಿ ಕಂಪನಿಗಳಿಗೆ ಹೆಚ್ಚಿನ ಬೆಂಬಲ ನೀಡಲು ಇತ್ತೀಚೆಗೆ ಹಲವು ಉಪಕ್ರಮಗಳನ್ನು ಜಾರಿಗೊಳಿಸಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಶುಕ್ರವಾರ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ VDMA ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಮಾವೇಶ-2023ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಚಿವರು, ಅವರು ಕರ್ನಾಟಕ ಮತ್ತು ಜರ್ಮನಿ ಮುಂಚಿನಿಂದಲೂ ಸದೃಢ ಕೈಗಾರಿಕಾ ಸಹಭಾಗಿತ್ವ ಹೊಂದಿವೆ. ಇದರಿಂದ ರಾಜ್ಯದಲ್ಲಿ ತಲೆಎತ್ತಲಿರುವ ಯೋಜನೆಗಳ ಕುರಿತು ವಿವರಿಸಿದರು.

ತಯಾರಿಕೆ ಮತ್ತು ತಾಂತ್ರಿಕತೆ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಜರ್ಮನಿ ಸಹಭಾಗಿತ್ವ ಪರಸ್ಪರ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡಿದೆ. ಜರ್ಮನಿ ಕಂಪನಿಗಳು ರಾಜ್ಯದ ಕೈಗಾರಿಕಾ ಸಾಮರ್ಥ್ಯ ಹೆಚ್ಚಿಸಲು ತಮ್ಮದೇ ಕಾಣಿಕೆ ನೀಡುತ್ತಿವೆ. ವಾಹನೋದ್ಯಮ, ಮೂಲಸೌಕರ್ಯ, ಸ್ಮಾರ್ಟ್ ಸಿಟಿ, ಡಿಜಿಟಲ್ ಪರಿಹಾರಗಳಿಗೆ ಸಂಬಂಧಿಸಿದಂತೆ ಗಮನ ಸೆಳೆಯುವಂತಹ ಕೆಲಸ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದರು

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *