ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ಇಂದು ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಜನರಿಗೆ ಭದ್ರತೆ ನೀಡುವ ಪೊಲೀಸರ ಜೊತೆಗೂಡಿ ದಸರಾ ಹಬ್ಬವನ್ನು ಆಚರಿಸಿಕೊಂಡರು. ಪೊಲೀಸ್ ವ್ಯವಸ್ಥೆ ಸಾಮಾಜಿಕವಾಗಿ ಭದ್ರತೆ, ರಕ್ಷಣೆಯ ವಿಚಾರದಲ್ಲಿ ಅಪಾರ ಗೌರವವನ್ನು ಹೊಂದಿದೆ. ಹಾಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ತಮ್ಮ ವಯಕ್ತಿಕ ಜೀವನವನ್ನು ಬಿಟ್ಟು ಜನರಿಗಾಗಿ ತಮ್ಮ ಸೇವೆಯನ್ನು ಮುಡುಪಾಗಿಟ್ಟವರು ಈ ರಾಜ್ಯದ ಪೊಲೀಸರು.
ಹಾಗೆ ನಮ್ಮ ಸಮಾಜದ ಜನರಿಗೆ ಭದ್ರತೆ ನೀಡಿ, ಸುರಕ್ಷತಾ ಭಾವ ನೀಡುತ್ತಿರುವ ಪೊಲೀಸ್ ಸಿಬ್ಬಂದಿ ವರ್ಗದವರಿಗೆ ದಸರಾ ಪ್ರಯುಕ್ತ ಇಂದು ಟಿ.ಎ.ಶರವಣ ಅವರು ಉಡುಗೊರೆ ನೀಡಿ ಸಿಹಿ ಹಂಚಿ ಅವರೊಂದಿಗೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಆ ನಂತರ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಪೊಲೀಸರು ತಮ್ಮ ಜೀವವನ್ನೇ ಮುಡುಪಾಗಿಟ್ಟು ನಮಗಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ನಮ್ಮೊಂದಿಗೆ ಸದಾ ಇರುವ ಜೀವವಾಗಿದ್ದು ಎಲ್ಲರ ಒಳಿತನ್ನೇ ಬಯಸುವ ಅವರ ಜೊತೆ ಇಂದು ನಾನು ಹಬ್ಬವನ್ನು ಆಚರಿಸಿದ್ದು ನನಗೆ ತುಂಬಾ ಸಂತಸವಾಗಿದೆ ಎಂದು ಹೇಳಿದರು
bigtvnews | Hubli Dharwad News | Kannada News | Karnataka News Hubli News | News In Hubli | Local news

