ಧಾರವಾಡ: ಕೋಟಿಗೂ ಹೆಚ್ಚು ಹಣವನ್ನ ಸೊಸಾಯಟಿಯಲ್ಲಿಟ್ಟು ಒಂದೇ ಸಮಯಯಲ್ಲಿ ಸೆಕ್ಯೂರಿಟಿಗಳು ಊಟಕ್ಕೆ ಹೋದಾಗ ಕಳ್ಳತನ ನಡೆದ ಪ್ರಕರಣ ಧಾರವಾಡದ ರಾಯಾಪುರದಲ್ಲಿರುವ ಶ್ರೀ ಧರ್ಮಸ್ಥಳ ಸೊಸಾಯಟಿಯಲ್ಲಿ ನಡೆದಿದೆ. ಕೋಣೆಯ ಕಿಡಕಿ ಮುರಿದು ಒಳಗೆ ನುಸುಳಿದ ದುಷ್ಕರ್ಮಿಗಳು, ಲಾಕರ್ ಒಡೆದು ಹಣವನ್ನ ದೋಚಿದ್ದಾರೆ. ಅಂದಾಜು ಒಂದು ಕೋಟಿ ಇಪ್ಪತೈದು ಲಕ್ಷ ರೂಪಾಯಿ ದೋಚಲಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದ ಮಾಹಿತಿ ಸಿಗುತ್ತಿದ್ದ ಹಾಗೇ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಪರಿಶೀಲನೆ ನಡೆಸುತ್ತಿದ್ದಾರೆ. ಇಂತಹ ದೊಡ್ಡ ಸಂಸ್ಥೆಯ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮರಾಗಳು ಇಲ್ಲದೇ ಇರುವುದು ಮತ್ತಷ್ಟು ಅನುಮಾನ ಹುಟ್ಟಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





