ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ದ್ವೇಷ ಸರ್ಕಾರವಾಗಿದೆ, ಹಿಂದೂ ಕಾರ್ಯಕರ್ತರ ಜೈಲಿಗಟ್ಟೋದನ್ನೇ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಹುಲಿ ಉಗುರು ವಿಚಾರದಲ್ಲಿ ನೋಟೀಸ್ ಇಲ್ಲದೆ ಅರ್ಚಕರನ್ನು ಬಂಧಿಸಿದ್ದರು. ಆದರೆ ಶಾಖಾದ್ರಿ ಮನೆಯಲ್ಲಿ ಚಿರತೆ ಚರ್ಮ ಸಿಕ್ಕಿದೆ, ಆದರೂ ಇನ್ನೂ ಬಂಧನ ಮಾಡಿಲ್ಲ. ಶಾಖಾದ್ರಿಗಾದ್ರೆ ನೋಟೀಸ್ ಕೊಡ್ತೀರಾ ನೀವು, ನಾಟಕ ಮಾಡ್ತೀರಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು. ಹಿಂದೂ ದ್ರೋಹಿಗಳಿದ್ದೀರಾ ನೀವು. ಇದು ಸಹನೆ ಆಗುವಂತದ್ದಲ್ಲ, ಇದು ಬಹಳ ದಿನ ನಡೆಯಲ್ಲ, ಎಚ್ಚರಿಕೆಯಿಂದಿರಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನು ಗಣೇಶನ ಕುರಿತು ಪಂಡಿತಾರಾಧ್ಯಶ್ರಿ ಅವರ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಪಂಡಿತಾರಾಧ್ಯರ ಬಗ್ಗೆ ಅಪಾರವಾದ ಗೌರವ ಇದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ಬಹಳ ದೊಡ್ಡ ಕ್ರಾಂತಿ ಮಾಡಿದ ಮಠ ಅದು, ಅವರು ಸಣ್ಣ ಹೇಳಿಕೆ ನೀಡಿ ವಿವಾದ ಸೃಷ್ಟಿ ಮಾಡಿದ್ದು ಸರಿಯಲ್ಲ. ನಿಮಗೆ ಶೋಭೆ ತರಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





