Breaking News

ವಿಶ್ವಾಸ ಮತದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಖಾದರ್

ಮಂಗಳೂರು: ನಮ್ಮದು ಒಂದೇ ಸರ್ಕಾರ, ಅದುವೇ ಮೈತ್ರಿ ಸರ್ಕಾರ. ನಾಳೆ ನಾವು ವಿಶ್ವಾಸ ಮತ ಯಾಚಿಸುತ್ತೇವೆ. ವಿಶ್ವಾಸ ಮತದಲ್ಲಿ ನಾವು ಗೆಲ್ಲುತ್ತೇವೆ.‌ನಾವು ವಿಶ್ವಾಸ ಗೆಲ್ಲುವ ‘ವಿಶ್ವಾಸ’ ಇದೆ ಎಂದು ಸಚಿವ ಯು.ಟಿ. ಖಾದರ ವಿಶ್ವಾಸ ವ್ಯಕ್ತಪಡಿಸಿದರು.ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಡುವೆ ಕಾಂಗ್ರೆಸ್, ಜೆಡಿಎಸ್ ಎಂಬ ಭಿನ್ನತೆ ಇಲ್ಲ.ನಾವೆಲ್ಲಾ ಅಣ್ಣ ತಮ್ಮಂದಿರು.‌ಉತ್ತಮ ಕುಟುಂಬದಲ್ಲಿ ಒಮ್ಮೊಮ್ಮೆ ಭಿನ್ನತೆ ಕಾಣುತ್ತದೆ ಎಂದು ತಿಳಿಸಿದರು. ‌ವಿಶ್ವಾಸ ಮತ ಯಾಚನೆ ವೇಳೆ ಹಲವರಿಗೆ ಮಾತನಾಡುವ ಅವಕಾಶ ಇದೆ. ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾದ ರಾಜ್ಯವಾಗಿದೆ.‌ಸಾಲಮನ್ನಾ ಹೇಗೆ ಮಾಡಬೇಕೆಂಬುದನ್ನು ನಮ್ಮ ಸರ್ಕಾರ ತೋರಿಸಿಕೊಟ್ಟಿದೆ.‌ಔರಾದ್ಕರ್ ವರದಿಯನ್ನು ಅನುಷ್ಠಾನ ಮಾಡಿ ಪೊಲೀಸರಿಗೆ ಬಲ ತುಂಬಿದ್ದೇವೆ.ರೋಶನ್ ಬೇಗ್ ಪ್ರಕರಣಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಅಲ್ಲದೇ ಐಎಂಎ ಪ್ರಕರಣದ ತನಿಖೆಯನ್ನು ಎಸ್ ಐಟಿ ಮಾಡುತ್ತಿದೆ ಎಂದರು.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *