ಪೊಲೀಸರಿಗೇ ರಕ್ಷಣೆ ಇಲ್ಲವಾ..?
ಧಾರವಾಡ: ಜಿಲ್ಲೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ದೀಪವಾಳಿ ಅಮವಾಸ್ಯೆ ದಿನ ನರೇಂದ್ರ ಗ್ರಾಮದ ಶಾಲೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಮೊಬೈಲ್ ಕೂಡ ಕಣ್ಮರೆಯಾಗಿದೆ.ದೀಪಾವಳ ಹಬ್ಬದ ಸಂದರ್ಭದಲ್ಲಿ ಅದ್ರಲ್ಲು ಅಮವಾಸ್ಯೆ ದಿನ ನರೇಂದ್ರ ಗ್ರಾಮದ ಶಾಲೆ ಬಳಿ ಕೆಲವರು ಜೂಜು ಆಡ್ತಿರೋದ್ರ ಖಚಿತ ಮಾಹಿತಿಯನ್ನ ಪಡೆದ ಪೊಲೀಸರು ದಾಳಿ ನಡೆಸಿದ್ರು. ಈ ವೇಲೆ ದುಷ್ಕರ್ಮಿಗಳು ಪೊಲೀಸರನ್ನೇ ಟಾರ್ಗೆಟ್ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಗಾಯಗೊಂಡ ಪೊಲೀಸರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಘಟನೆಯಲ್ಲಿ ಗ್ರಾಮೀಣ ಪಿಎಸ್ಐ (ಕಾನೂನು ಸುವ್ಯವಸ್ಥೆ ) ಬಸನಗೌಡ ಬಿ. ಎಂ, ಹೆಡ್ಕಾನ್ಸಟೇಬಲ್ (HC585)ನಾಗರಾಜ್ ಹಳವರ ಮೇಲೆ ಹಲ್ಲೆ ನಡೆದಿದೆ. ಜೊತೆಗೆ ಪಿಎಸ್ಐ ಅವರ ಮೊಬೈಲ್ ಕೂಡ ಕಾಣೆಯಾದ ಬಗ್ಗೆ ವರದಿಯಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ 08 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆಸಲಾಗಿದೆ.ಒಟ್ಟಿನಲ್ಲಿ ರಕ್ಷಣೆ ನೀಡಬೇಕಾದ ಆರಕ್ಷರಿಗೇ ರಕ್ಷಣೆ ಇಲ್ಲದಂಥ ಪ್ರಕರಣ ಮತ್ತೊಮ್ಮೆ ಬಯಲಾಗಿದ್ದು, ಪೊಲೀಸರಿಗೇ ರಕ್ಷಣೆ ಇಲ್ಲವಾ..? ಅನ್ನೋ ಪ್ರಶ್ನೆಯನ್ನು ಗಟ್ಟಿಗೊಳಿಸಿದೆ. ಪೊಲೀಸರಿಗೇ ಹೀಗಾದ್ರೆ, ಜನ ಸಾಮಾನ್ಯರ ಸ್ಥಿತಿ ಏನು…? ಅನ್ನೋ ಪ್ರಶ್ನೆಗೂ ಇದು ಕಾರಣವಾಗಿದ್ದು, ಇನ್ನಾದ್ರೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ…? ಸಮಾಜ ಘಾತಕ ಶಕ್ತಿಗಳನ್ನ ಮಟ್ಟ ಹಾಕ್ತಾರಾ…? ಅನ್ನೋದನ್ನ ಕಾದು ನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

