ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಡಿಜಿಟಲ್ ಸಹಿ (ಡಿಎಸ್‌ಸಿ) ನಕಲು ಮಾಡಿ, ಜಿಲ್ಲಾ ಖಜಾನೆಗೆ ₹ 15 ಲಕ್ಷ ಮೌಲ್ಯದ ಬಿಲ್ ಸಲ್ಲಿಸಿದ್ದ ನಗರಾಭಿವೃದ್ಧಿ ಕೋಶದ 6 ನೌಕರರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಸಾಧಿಕ್, ವಿಜಯ್ ಕುಮಾರ್, ವಿನಯ್ ಶರ್ಮಾ, ಬಸವರಾಜ್, ಮೆಹಬೂಬ್ ಭಾಷಾ, ವೆಂಕಟೇಶ್ ಬಂಧಿತರು. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿನ ದೂರಿನ ಮೇರೆಗೆ ಶುಕ್ರವಾರ 6 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಡಿವೈಎಸ್‌ಪಿ ಅರುಣ ನಾಗೇಗೌಡ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

