Breaking News

ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ರೈತರು ಪ್ರತಿಭಟನೆ….

ಚಾಮರಾಜನಗರ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯ ರೈತ ಮುಖಂಡರನ್ನು ರಾತ್ರೋರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಖಂಡಿಸಿ ಶುಕ್ರವಾರ ಚಾಮರಾಜನಗರದ ಉಡಿಗಾಲ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ‌ ತಾಲೂಕು ಅಧ್ಯಕ್ಷ ಹಾಲಿನ‌ ನಾಗರಾಜು ಅವರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ರೈತರು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಉಡಿಗಾಲ ಗ್ರಾಮದಲ್ಲಿ ಚಾಮರಾಜನಗರ-ಗುಂಡ್ಲುಪೇಟೆ ಮುಖ್ಯರಸ್ತೆಯನ್ನು ತಡೆದು ಕೆಲಕಾಲ ಧರಣಿ ನಡೆಸಿದ ರೈತ ಮುಖಂಡರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

Share News

About BigTv News

Check Also

ಸಿವಿಲ್ ವ್ಯಾಜ್ಯದಲ್ಲಿ ಖಾಕಿ ದರ್ಬಾರ್‌ಗೆ ಹೈಕೋರ್ಟ್ ಬ್ರೇಕ್..! ಅಧಿಕಾರ ಮೀರಿದರೆ ಪೊಲೀಸರಿಗೇ ಶಿಸ್ತು ಕ್ರಮದ ಬಿಸಿ..!!

ಆಸ್ತಿ ವ್ಯಾಜ್ಯದಲ್ಲಿ ಪೊಲೀಸರ ಆಟಕ್ಕೆ ಕಡಿವಾಣ..! ಸುತ್ತೋಲೆ ಉಲ್ಲಂಘಿಸಿದರೆ ಅಧಿಕಾರಿಗಳೇ ನೇರ ಹೊಣೆ — ಇಲಾಖೆಯ ಖಡಕ್ ವಾರ್ನಿಂಗ್..! ಸಿವಿಲ್ …

Leave a Reply

Your email address will not be published. Required fields are marked *